ADVERTISEMENT

ಗಮನ ಸೆಳೆದ ವಿಜ್ಞಾನ ಪ್ರದರ್ಶನ

ಇಂಡಿಯ ಕರ್ನಾಟಕ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಪ್ರಾಯೋಗಿಕ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 5:29 IST
Last Updated 30 ಜನವರಿ 2017, 5:29 IST
ಗಮನ ಸೆಳೆದ ವಿಜ್ಞಾನ ಪ್ರದರ್ಶನ
ಗಮನ ಸೆಳೆದ ವಿಜ್ಞಾನ ಪ್ರದರ್ಶನ   

ಇಂಡಿ: ಪಟ್ಟಣದ ಕರ್ನಾಟಕ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ವಿಜ್ಞಾನ ಪ್ರಯೋಗ ಪ್ರದರ್ಶನವು ಜನಮನ ಸೆಳೆಯಿತು.
ಘನತ್ಯಾಜ್ಯ ವಿಲೇವಾರಿ ಮಾಡುವ ಕ್ರಮ ಮತ್ತು ಅದರಿಂದಾಗುವ ಲಾಭಗಳ ಬಗ್ಗೆ ಸಿದ್ದಪಡಿಸಿದ್ದ ಪ್ರಯೋಗದ ಬಗ್ಗೆ ನಿಖಿಲ ದಮಾಮಿ ಮತ್ತು ಅವರ ತಂಡ ವಿವರಿಸಿತು.

ನಿಂಬೆ ಹಣ್ಣಿನ ರಸದಿಂದ ಶಕ್ತಿ ಉತ್ಪಾದನೆಯ ಪ್ರಯೋಗವನ್ನು ಶರಣ ಮಸಳಿ, ಕಾರ್ತಿಕ ಪಾಟೀಲ ಅವರ ತಂಡ ಮಾಡಿದ್ದರು.

ಕಾಡನ್ನು ರಕ್ಷಿಸುವ ವಿಧಾನ ಮತ್ತು ಅದರ ಸದುಪಯೋಗದ ಪ್ರಯೋಗ ವನ್ನು ಸಂಜನ ಅಂಗಡಿ, ಅನಿತಾ ಸುಧಾಮ ಮತ್ತು ಅವರ ತಂಡ ಸಿದ್ದಪಡಿಸಿತ್ತು.
ಆಮ್ಲಜನಕವನ್ನು ಹೆಚ್ಚಿಸಿ, ಪರಿಸರ ಶುದ್ಧವಾಗಿಡುತ್ತದೆ ಎಂದು ಹೇಳುವ ಪರಿ ಗಮನ ಸೆಳೆಯಿತು.

ವೇದಾ ಕೆಂಗಿನಾಳ ಮತ್ತು ಅವಳ ತಂಡವು ಮಳೆ ನೀರನ್ನು ಹೇಗೆ ಸಂಗ್ರಹಿಸಿಕೊಳ್ಳಬೇಕೆಂದು ಮಾಡಿದ ಪ್ರಯೋಗದ ಬಗ್ಗೆ ವಿವರಣೆ ನೀಡುವ ಪರಿ ಗಮನ ಸೆಳೆಯಿತು.

ಪರಾಗಸ್ಪರ್ಷದ ಬಗ್ಗೆ ಅನುಶಾ ಕಾಳೆ ಪ್ರಯೋಗ ಸಿದ್ದಪಡಿಸಿ ವಿವರಿಸಿದರು. ಪರಿಸರ ಮಾಲಿನ್ಯ ತಡೆಗಟ್ಟುವ ರೀತಿಯನ್ನು ಸಿದ್ದಗೊಳಿಸಿದ್ದ ಮೇಘಾ ಮಾಸ್ತರ ಮತ್ತು ಚೈತ್ರಾ ಹತ್ತರಕಿ ಅದರ ಉಪಯೋಗ ತಿಳಿಸಿದರು.

ಶಾಹಿತಾ ಬಗಲಿ ಜಲಚಕ್ರದ ಬಗ್ಗೆ ವಿವರಿಸಿದರು. ಜಾಗತಿಕ ತಾಪಮಾನ ದಿಂದ ಆಗುವ ಅನಾಹುತಗಳ ಬಗ್ಗೆ ಪ್ರಯೋಗ ಸಿದ್ದಪಡಿಸಿದ್ದ ಸಾಕ್ಷಿ ರೂಪ ನೂರ ಮತ್ತು ಸಮರ್ಥ ಪಟ್ಟಣಶೆಟ್ಟಿ ಅದರ ಬಗ್ಗೆ ವಿವರಿಸುತ್ತ ಅದರಿಂದಾ ಗುವ ಹಾನಿಯ ಬಗ್ಗೆ ತಿಳಿಸಿದರು.

ಹೀಗೆ ಸುಮಾರು 36 ಪ್ರಯೋಗಗಳನ್ನು ಸಿದ್ದಗೊಳಿಸಿದ್ದ ಮಕ್ಕಳು ಪ್ರಯೋಗ ವೀಕ್ಷಿಸಲು ಬಂದಿದ್ದ ಜನ ಸಾಮಾನ್ಯರಿಗೆ ಮತ್ತು ಪಾಲಕರಿಗೆ ಅಚ್ಚರಿ ಮೂಡಿಸಿದರು.

ಇವರೇ ಮುಂದಿನ ವಿಜ್ಞಾನಿಗಳು ಎಂಬುದನ್ನು ತೋರಿಸಿಕೊಟ್ಟರು.ಮುಖ್ಯ ಶಿಕ್ಷಕ ಅವಿನಾಶ ಘಿರಡಿಮಠ, ಸಂಸ್ಥೆಯ ನಿರ್ದೇಶಕರಾದ ಎಸ್.ಎಂ.ಕಡಕೋಳ, ಪ್ರದೀಪ ಮುರಗುಂಡಿ, ಮಹಾದೇವ ಬಾರೀಕಾಯಿ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.