ADVERTISEMENT

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ 12 ಜನ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 5:29 IST
Last Updated 5 ಸೆಪ್ಟೆಂಬರ್ 2015, 5:29 IST

ವಿಜಯಪುರ: ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 12 ಶಿಕ್ಷಕರನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡ­ಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಬಿರಾದಾರ ತಿಳಿಸಿದ್ದಾರೆ.

ಪ್ರಾಥಮಿಕ ವಿಭಾಗದಿಂದ 7, ಪ್ರೌಢಶಾಲೆ ವಿಭಾಗದ ಐವರು ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. 

ಪ್ರಾಥಮಿಕ ವಿಭಾಗ: ಇವಣಗಿ ಗ್ರಾಮದ ಕೆಎಚ್‌ಪಿಎಸ್‌ ಶಾಲೆಯ ಸಹ ಶಿಕ್ಷಕಿ ಗಿರಿಜಾ ಬ.ಪಾಟೀಲ, ಸಹ ಶಿಕ್ಷಕ­ರಾದ ಸಿ.ಎಂ.ಬಾಸರಗಾಂವ (ಎಲ್‌ಪಿ­ಎಸ್ ಬನಪುರೆ ವಸ್ತಿ, ಜಿಗ­ಜೇವಣಿ), ಎ.ಎಂ.ಹೊಸೂರ (ಯುಬಿಎಚ್‌ಪಿಎಸ್ ಹಿರೇಮಸಳಿ), ಆರ್.ಆರ್.ಹುಣಸಿಗಿಡದ (ಎಲ್‌ಪಿಎಸ್ ಬರಟಗಿ ಎಲ್.ಟಿ.2), ದೈಹಿಕ ಶಿಕ್ಷಣ ಶಿಕ್ಷಕ ಎಸ್.ಆರ್. ಜಾಗೀರ­ದಾರ (ಕೆಬಿಎಸ್ ನಂ.1 ವಿಜಯಪುರ), ಮುಖ್ಯೋಪಾಧ್ಯಾಯರಾದ ಎಸ್.ಎಚ್.ಬಿರಾದಾರ (ಎಚ್‌ಪಿಎಸ್, ವಿಭೂತಿ­ಹಳ್ಳಿ), ಆರ್.ವೈ.ದಾಸರ (ಕೆಬಿಎಚ್‌ಪಿಎಸ್ ತಾಳಿಕೋಟೆ).

ಪ್ರೌಢಶಾಲೆ ವಿಭಾಗ: ಮುಖ್ಯೋ­ಪಾಧ್ಯಾಯ ಎಸ್.ವಿ.ಬಿರಾದಾರ (ಎಸ್.ಎಸ್.­ಪ್ರೌಢಶಾಲೆ, ಸುಂಗಠಾಣ), ಸಂಗೀತ ಶಿಕ್ಷಕ ಬಸವರಾಜ ಹಿರೇಮಠ (ಬಿಎಲ್‌ಡಿಇ ಬಾಲಕಿಯರ ಪ್ರೌಢಶಾಲೆ,- ವಿಜಯಪುರ), ಸಹ ಶಿಕ್ಷಕರಾದ ಅಜಿತ ಗಾವಡೆ (ಸರ್ಕಾರಿ ಪ್ರೌಢಶಾಲೆ, ಹಡಲ­ಸಂಗ), ವಿ.ಎನ್.ಯಾತಗಿರಿ (ಸರ್ಕಾರಿ ಪ್ರೌಢಶಾಲೆ, ಪೀರಾಪುರ) ದೈಹಿಕ ಶಿಕ್ಷಣ ಶಿಕ್ಷಕ ಸೋಮನಗೌಡ ಬರಗಿ (ಗ್ರಾಮೀಣ ವಿದ್ಯಾವರ್ಧಕ ಸಂಘ, ಹಣಮಾಪುರ) ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಡಿಡಿಪಿಐ ಬಿರಾದಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.