ADVERTISEMENT

‘ತಾಂಡಾಗಳಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 5:21 IST
Last Updated 30 ಜನವರಿ 2017, 5:21 IST
‘ತಾಂಡಾಗಳಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ’
‘ತಾಂಡಾಗಳಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ’   

ವಿಜಯಪುರ: ತಾಂಡಾಗಳಲ್ಲಿ ವಿದ್ಯುತ್ ಕಂಬ ಅಳವಡಿಕೆ, ಸಮುದಾಯ ಭವನ ಸೇರಿದಂತೆ ಹಲ ಸೌಲಭ್ಯಗಳನ್ನು ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಕಲ್ಪಿಸ ಲಾಗುತ್ತದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಲ್ಲು ನಾಯ್ಕ್ ಹೇಳಿದರು.

ದುರ್ಗಾದೇವಿ ಯುವಕ ಸಂಘ, ಸ್ಪಿನ್ನಿಂಗ್ ಮಿಲ್ ತಾಂಡಾ ವತಿಯಿಂದ ಬರಟಗಿ ತಾಂಡಾ ನಂಬರ್ 3ರಲ್ಲಿ ನಿಗ ಮದ ವತಿಯಿಂದ ಕಲ್ಪಿಸಲಾಗುತ್ತಿರುವ ಸೌಲಭ್ಯ, ಯೋಜನೆಗಳ ಕುರಿತಾದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಂಡಾ ಅಭಿವೃದ್ಧಿ ನಿಗಮವನ್ನೇ ಪ್ರಮುಖ ಧ್ಯೇಯವಾಗಿರಿಸಿಕೊಂಡು ರಚಿಸಲಾಗಿ ರುವ ಅಭಿವೃದ್ಧಿ ನಿಗಮವು ತಾಂಡಾ ಗಳಲ್ಲಿ ಸಮುದಾಯ ಭವನ, ಸಿ.ಸಿ.ರಸ್ತೆ, ವಿದ್ಯುತ್ ಕಂಬಗಳ ಅಳವಡಿಕೆ ಸೇರಿ ದಂತೆ ಹಲ ಅಭಿವೃದ್ಧಿ ಕಾರ್ಯಕ್ರಮ ಕೈ ಗೊಳ್ಳಲಿದೆ ಎಂದು ಭರವಸೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ ರಾಜಪಾಲ ಚವ್ಹಾಣ ಮಾತನಾಡಿ ತಾಂಡಾ ಅಭಿವೃದ್ಧಿ ನಿಗಮದಿಂದ ನಿರುದ್ಯೋಗಿ ಯುವಕ-–ಯುವತಿಯರಿಗೆ ಹಲ ಸೌಲಭ್ಯಗಳಿದ್ದು, ಅವುಗಳನ್ನು ಪಡೆದುಕೊಂಡು ತಮ್ಮ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಬೇಕು ಎಂದರು.

ಅನಸೂಯಾ ಜಾಧವ, ಬಸವರಾಜ ನಾಯಕ, ಕೃಷ್ಣ ಜಾಧವ, ಹುನ್ನು ರಜ ಪೂತ, ಶ್ರೀಕಾಂತ ರಾಠೋಡ, ಹರಸಿಂಗ ಪವಾರ, ಕವಿತಾ ಚವ್ಹಾಣ, ಸುರೇಶ ಪವಾರ, ವಾಸುದೇವ ರಾಠೋಡ, ರಮೇಶ ಲಮಾಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.