ADVERTISEMENT

ನೂತನ ಜಿಎಸ್‌ಟಿ ಕಾಯ್ದೆ ವಿಚಾರ ಸಂಕಿರಣ ಇಂದು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 7:14 IST
Last Updated 22 ಮಾರ್ಚ್ 2017, 7:14 IST

ವಿಜಯಪುರ: ನಗರದ ಬಂಗಾರೆಮ್ಮ ಸಜ್ಜನ ಆವರಣದಲ್ಲಿರುವ ಬಿಎಲ್‌ಡಿಇ ವೈದ್ಯಕೀಯ ವಿಶ್ವವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ಇದೇ 22ರ ಬೆಳಿಗ್ಗೆ 9.30ಕ್ಕೆ ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‌ಟಿ) ಕುರಿತಾದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.

ಬಿಎಲ್‌ಡಿಇ ಸಂಸ್ಥೆಯ ಎ.ಎಸ್. ಪಾಟೀಲ ವಾಣಿಜ್ಯ ಕಾಲೇಜಿನ,  ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಈ ವಿಚಾರ ಸಂಕಿರಣ ಸಂಘಟಿಸಲಾಗಿದೆ.

ಬಿಎಲ್‌ಡಿಇ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಜಿ.ಮೂಲಿ ಮನಿ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 11ಕ್ಕೆ ಶರಣಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಪ್ರಥಮ ಗೋಷ್ಠಿ ನಡೆಯಲಿದ್ದು, ಹುಬ್ಬಳ್ಳಿಯ ಚೇತನ ವ್ಯವಹಾರ ಅಧ್ಯಯನ ಮಹಾ ವಿದ್ಯಾಲಯದ ನಿರ್ದೇಶಕ ಡಾ.ರಮಾ ಕಾಂತ ಕುಲಕರ್ಣಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ.

ನಂತರ 12.45ರಿಂದ ತುಮಕೂರಿನ ಪಿಜಿಡಿಎಂಎಸ್ ಆ್ಯಂಡ್ ಆರ್‌ಸಿಎಸ್ಐಟಿ ನಿರ್ದೇಶಕ ಡಾ.ಎಂ.ಆರ್.ಶೊಲ್ಲಾಪುರ ಅಧ್ಯಕ್ಷತೆಯಲ್ಲಿ ಸಂವಾದ ನಡೆಯಲಿದೆ. ವಿಷಯ ಪರಿಣಿತರಾದ ಡಿ.ಎಸ್. ಗುಡ್ಡೋಡಗಿ, ಎಸ್.ಎಸ್.ಶಿಂಧೆ, ಎಸ್.ಎಸ್.ಗೊಳಸಂಗಿಮಠ, ಶಾಂತೇಶ ಕಳಸಗೊಂಡ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.