ADVERTISEMENT

ಪರೀಕ್ಷಾ ಭಯ ಬೇಡ; ಮಕ್ಕಳಿಗೆ ಸಲಹೆ

ಹಿರೂರ ಗ್ರಾಮದ ಕೆಜಿವಿಎ ಸಂಘದ ಶಾಲೆಗಳಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ, ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:24 IST
Last Updated 14 ಮಾರ್ಚ್ 2017, 6:24 IST

ಹಿರೂರ(ತಾಳಿಕೋಟೆ):   ‘ಪರೀಕ್ಷೆಗಳ ಬಗ್ಗೆ ಭಯ ಬಿಟ್ಟು, ನಿರಾತಂಕವಾಗಿ ನಕಲು ಮಾಡದೇ ಪರೀಕ್ಷೆ ಬರೆಯುವ ಮೂಲಕ ನಿಮ್ಮ ನಿಜ ಸಾಮರ್ಥ್ಯ ಸಾಬೀತುಪಡಿಸಿ ಪ್ರಥಮ ಮೂರು ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಬಂಗಾರದ ಪದಕ ನೀಡುವುದಾಗಿ’  ಕೆ.ಜಿ.ವಿ.ಎ.ಸಂಘದ ಅಧ್ಯಕ್ಷ, ಮಾಜಿ ಸಚಿವ ಬಿ.ಎಸ್‌.ಪಾಟೀ (ಸಾಸನೂರ) ಹೇಳಿದರು.

ಅವರು ಗ್ರಾಮದಲ್ಲಿರುವ ಸಂಘದ ಎಸ್.ಬಿ.ಪಾಟೀಲ ಸಾಸನೂರ ಪ್ರಾಥಮಿಕ ಹಾಗೂ ಶ್ರೀ ಭೋಗೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಶುಭ ಕೋರುವ ಹಾಗೂ ವಾರ್ಷಿಕ  ಸ್ನೇಹ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಿ.ಎಂ.ಪಾಟೀಲ  ಮಾತನಾಡಿ, ಮಕ್ಕಳ ಭವಿಷ್ಯ ಉತ್ತಮ ವಾಗಿಸುವತ್ತ ಸಂಸ್ಥೆ ಮುನ್ನಡೆದಿದ್ದು ಸಂಸ್ಥೆಯ ಅಧ್ಯಕ್ಷರು, ಶಿಕ್ಷಕರ ಶ್ರಮ ಎದ್ದು ಕಾಣುತ್ತದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಬ.ಅಸ್ಕಿ , ಸಾನ್ನಿಧ್ಯ ವಹಿಸಿದ್ದ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದ  ಗುರು ಶಾಂತವೀರ ಶಿವಾಚಾರ್ಯ, ತಾಳಿಕೋಟೆ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ಸತೀಶ ಝಳಕಿ ಮಾತನಾಡಿದರು.

ಅಸ್ಕಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಗುಂಡುರಾವ್ ಧನಪಾಲ ಪವಾಡ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು. ನಿವೃತ್ತ ಪ್ರಾಚಾರ್ಯ ಎಸ್‌.ಎನ್‌. ಬಸಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ ದರು.  ಮುಖ್ಯಶಿಕ್ಷಕ  ಬಿ.ಎಸ್.ವಡಗೇರಿ ವರದಿ ವಾಚಿಸಿದರು. ವೇದಿಕೆಯಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯ ಗುರು ರಾಜ ಕೊಪ್ಪದ, ಸಂಘದ ಸದಸ್ಯ ಬಿ.ಎ.ಬಿರಾದಾರ, ಆಡಳಿತಾಧಿ ಕಾರಿ ಎಸ್.ಎಸ್.ಸಂಗನ ಗೌಡರ,  ಪತ್ರಕರ್ತ ಅಂಬಾಜಿ ಘೋರ್ಪಡೆ, ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಹಾಗೂ ಕಳೆದ ಬಾರಿಯ ರ್‍ಯಾಂಕ್ ವಿಜೇತ ವಿದ್ಯಾರ್ಥಿ ಗಳನ್ನು ಗೌರವಿಸಲಾಯಿತು.  ಬಿ.ಕೆ.ಪಾಟೀಲ ಸ್ವಾಗತಿಸಿದರು. ಶಿಕ್ಷಕಿ  ಎಸ್.ಬಿ.ಮಠ ನಿರೂಪಿಸಿದರು. ಡಿ.ಡಿ.ಲಮಾಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.