ADVERTISEMENT

ಶಿಕ್ಷಕರ ನೇಮಕಾತಿಗಾಗಿ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 9:28 IST
Last Updated 14 ಜುಲೈ 2017, 9:28 IST

ವಿಜಯಪುರ: ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿ ಗಳ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಮಹಾತ್ಮಗಾಂಧಿ ವೃತ್ತ ದಿಂದ ಆರಂಭವಾದ ಪ್ರತಿಭಟನಾ ಮೆರ ವಣಿಗೆ ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿತು. ಮೆರವಣಿಗೆಯುದ್ದಕ್ಕೂ  ‘ಉದ್ಯೋಗಾ ಕಾಂಕ್ಷಿಗಳ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆ ಮೊಳಗಿತು.

ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ ‘ಎರಡು ವರ್ಷಗಳಿಂದ ಸರ್ಕಾರ ನಿರುದ್ಯೋಗಿ ಯುವಕರಿಗೆ ಸುಳ್ಳು ಆಶ್ವಾಸನೆ ಕೊಡುವುದರ ಮೂಲಕ ಚೆಲ್ಲಾಟವಾಡುತ್ತಿದೆ. ರಾಜ್ಯದಲ್ಲಿ ಹಲ ವಾರು ಶಾಲೆಗಳಲ್ಲಿ ಏಕೋಪಾಧ್ಯಾಯ ಶಿಕ್ಷಕರಿದ್ದಾರೆ.

ADVERTISEMENT

ಹಲವು ಕಡೆ ಶಿಕ್ಷಕರ ಕೊರತೆಯಿದೆ. ಅಂಕಿ-ಸಂಖ್ಯೆಗಳ ಪ್ರಕಾರ 75 ಸಾವಿರ ಶಿಕ್ಷಕರ ಅವಶ್ಯಕತೆಯಿದೆ ಎಂದು ಸ್ವತಃ ಸಚಿವರೇ ಪ್ರಕಟಿಸಿದ್ದರು. ಆದರೆ ಇಲ್ಲಿಯ ವರೆಗೆ ಕುಂಟು ನೆಪಗಳನ್ನು ಹೇಳುತ್ತಾ ನೇಮಕಾತಿಗೆ ಮುಂದಾಗದೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ನಿಜವಾದ ಶಿಕ್ಷಣ ಕಾಳಜಿ, ಸಮಾಜದ ಅಭಿವೃದ್ಧಿ ದೃಷ್ಟಿಕೋನದಿಂದ ಕೂಡಲೇ ಖಾಲಿಯಿ ರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಭೈರವ ಭಂಡಾರಿ ಮಾತನಾಡಿ ‘ಡಿ.ಇಡಿ, ಬಿ.ಇಡಿ ಮುಗಿಸಿದ ವಿದ್ಯಾರ್ಥಿಗಳು ಇಂದಲ್ಲಾ ನಾಳೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿ ತಿದ್ದಾರೆ. ಆದರೆ ಸರ್ಕಾರ ತಮ್ಮ ವೈಯ ಕ್ತಿಕ ಲಾಭ, ಇನ್ನಿತರ ಕಾರ್ಯಗಳಲ್ಲಿ ತೊಡಗಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದೆ’ ಎಂದು ದೂರಿದರು.

ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ಬಾಳು ಜೇವೂರ, ಪ್ರೇಮಾ, ಪ್ರಭು, ರಾಘವೇಂದ್ರ ಮಾಡಗಿ, ಶ್ರೀಶೈಲ, ಮಲ್ಲೇಶ, ಮೊಹ್ಮದ ಅಲಿ, ಎಸ್.ವಿ. ಜಮಾದಾರ್, ಎಂ.ಎಂ.ಹತ್ತರಕಾಳ, ಸುರೇಶ ದಳವಾಯಿ, ಎಂ.ಡಿ.ರಫೀಕ್, ಅರವಿಂದ ಕಾಂಬಳೆ, ಪಿ.ಕೆ.ಹಡಪದ, ಹಣಮಂತ, ಮಂಜುನಾಥ, ಸಂಜು, ಶ್ರೀಕಾಂತ, ಜಿ.ವಿ.ಸಜ್ಜನ, ಸುಧಾಕರ, ಮುತ್ತು ನಾಯಕವಾಡಿ, ಸುನೀಲ, ಗುರು ರಾಜ, ಬಸವರಾಜ, ವಿಠ್ಠಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.