ADVERTISEMENT

ಸಾಲು ಮರದ ತಿಮ್ಮಕ್ಕಗೆ ಅಭಿನಂದನೆ 22ಕ್ಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 6:50 IST
Last Updated 18 ಮಾರ್ಚ್ 2017, 6:50 IST

ಸಿಂದಗಿ: ನಗರದ ಮಹಿಳಾ ಜಾಗರಣ ವೇದಿಕೆ 21ನೇ ವಾರ್ಷಿಕೋತ್ಸವದ ಸಂದರ್ಭ ದಲ್ಲಿ ಸಾವಿತ್ರಿಬಾಯಿ ಪುಲೆ ಸ್ಮೃತಿ ದಿನ, ಭಗಿನಿ ನಿವೇದಿತಾಳ 150ನೇ ಜಯಂತ್ಯುತ್ಸವ, ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಸಿರು ಸಿರಿ ಸಂಕಲ್ಪ ಅಂಗವಾಗಿ ಸಾಲು ಮರದ ತಿಮ್ಮಕ್ಕ ಅವರನ್ನು ಅಭಿನಂದಿಸಲಾಗುವುದು ಎಂದು ವೇದಿಕೆ ಅಧ್ಯಕ್ಷೆ ಶೈಲಜಾ ಸ್ಥಾವರಮಠ ಹೇಳಿದರು.

ನಗರದ ಡಾ.ಅಂಬೇಡ್ಕರ್‌ ಭವನ ದಲ್ಲಿ ಇದೆ 22ರಂದು ಈ ಸಮಾರಂಭ ನಡೆಯಲಿದೆ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, ಸಾಲು ಮರದ ತಿಮ್ಮಕ್ಕ ಅವ ರೊಂದಿಗೆ 65 ವರ್ಷ ವಯೋಮಾನದ 50 ಜನ ಸಾಧಕ ಮಾತೆಯರನ್ನು ಸಹ ಸನ್ಮಾನಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಸಾವಿರ ಜನರಿಗೆ ಸಾವಿರ ಗಿಡ ನೀಡಿ ಮನೆ ಗೊಂದು ಮರ ಹಸಿರು ಸಿರಿ ಸಂಕಲ್ಪ ನಡೆಸಲಾಗುವುದು. ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತ, ಅಲ್ಲಿಂದ ಡೋಹರ ಕಕ್ಕಯ್ಯ ವೃತ್ತ.  ಬಸವೇಶ್ವರ ವೃತ್ತದಿಂದ ವಿವೇಕಾನಂದ ವೃತ್ತ, ಕನಕದಾಸ ವೃತ್ತದವರೆಗೆ ರಸ್ತೆಯುದ್ದಕ್ಕೂ ಗಿಡ ಬೆಳೆಸಲು ಕೆಲವು ಪರಿಸರ ಪ್ರೇಮಿ ಗಳು, ಸೇವಾ ಸಂಘಗಳು ದತ್ತು ಪಡೆ ಯಲು ಮುಂದಾಗಿರುವುದಾಗಿ ತಿಳಿಸಿದರು.

ADVERTISEMENT

ಯಂಕಂಚಿ ಹಿರೇಮಠದ ಶ್ರೀ ಉದ್ಘಾಟನಾ ಸಮಾಂಭದ ಸಾನ್ನಿಧ್ಯ ವಹಿ ಸುವರು. ಶಾಸಕ ರಮೇಶ ಭೂಸನೂರ, ಮಾಜಿ ಶಾಸಕರಾದ ಎಂ.ಸಿ.ಮನಗೂಳಿ, ಶರಣಪ್ಪ ಸುಣಗಾರ, ಹೈದರಾಬಾದ ಕರ್ನಾಟಕ ಮಂಡಳಿ ಕಾರ್ಯದರ್ಶಿ ಗಂಗೂಬಾಯಿ ಮಾನಕರ, ಗದಗ ಜಿಲ್ಲಾ ಪಂಚಾಯಿತಿ ಸಿಇಓ ಮಂಜುನಾಥ ಚವ್ಹಾಣ, ಶಿಕ್ಷಕಿ ಹೇಮಾ ವಸ್ತ್ರದ, ಶಿವಮೊಗ್ಗದ ಎಚ್.ಡಿ.ಕುಮಾರಸ್ವಾಮಿ ಬ್ರಿಗೇಡ್ ಅಧ್ಯಕ್ಷರಾದ ಡಾ.ಶಾಂತಾ ಸುರೇಂದ್ರ, ರೈತ ಮುಖಂಡ ಅಶೋಕ ಅಲ್ಲಾಪೂರ ಪಾಲ್ಗೊಳ್ಳುವರು ಎಂದು ಹೇಳಿದರು.

ವೇದಿಕೆ ಪ್ರಮುಖೆ ಅನ್ನಪೂರ್ಣ ಹೊಟಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.