ADVERTISEMENT

ಸ್ವಾವಲಂಬನೆ ಸಾಧಿಸಲು ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 6:55 IST
Last Updated 3 ಮಾರ್ಚ್ 2017, 6:55 IST

ಇಂಡಿ: ಕೃಷಿ ಜೊತೆಗೆ ಹಸು, ಕುರಿ ಮತ್ತು ಮೊಲ ಸಾಕಾಣಿಕೆ ಮೂಲಕ ರೈತರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.

ಅವರು ತಾಲ್ಲೂಕಿನ ಇಂಗಳಗಿ ಗ್ರಾಮದ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡಿದ್ದ ರೇಷ್ಮೆ ಕೃಷಿ ವಸ್ತು ಪ್ರದರ್ಶನ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಮಾರ್ಗದರ್ಶನದಲ್ಲಿ ರೇಷ್ಮೆ ಕೃಷಿ ಕೈಗೊಂಡರೆ ಸರ್ಕಾರಿ ಅಧಿಕಾರಿಗಳ ಸಂಬಳಕ್ಕಿಂತ ಹೆಚ್ಚು ಹಣವನ್ನು ಗಳಿಸಬಹುದು ಎಂದೂ ಹೇಳಿದರು.
ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ, ತಾಲ್ಲೂಕು ಜೆಡಿಎಸ್ ಅದ್ಯಕ್ಷ ಬಿ.ಡಿ.ಪಾಟೀಲ ಮಾತನಾಡಿದರು.

ರೇಷ್ಮೆ ಇಲಾಖೆ ಉಪ ನಿರ್ದೇಶಕ ಚಂದ್ರಮೂರ್ತಿ, ಸಹಾಯಕ ನಿರ್ದೇಶಕ ಬಿ.ವೈ.ಬಿರಾದಾರ, ಕೇಂದ್ರ ರೇಷ್ಮೆ ಸಹಾಯಕ ಅರ್ಜುನ ಮಾತನಾಡಿ, ರೇಷ್ಮೆ ಕೃಷಿ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಿದರು.

ಪ್ರಗತಿಪರ ರೈತ ಪ್ರಭು ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಉಪಾ ಧ್ಯಕ್ಷ ಶೀಲವಂತ ಉಮರಾಣಿ, ಚಂದ್ರ ಶೇಖರ ರೂಗಿಮಠ, ವಿಜು ಪಾಟೀಲ, ಸತೀಶ ಕುಂಬಾರ, ಎನ್.ಎಸ್ .ಬಿರಾ ದಾರ, ರಾಮಸಿಂಗ ಕನ್ನೊಳ್ಳಿ, ಸಿದ್ದು ಡಂಗಾ, ರಮೇಶ ಧರೆಣ್ಣವರ, ಸುಭಾಸ ಥೋರಾತ, ಶಿವಪ್ಪ ತೊಗರಿ, ಆರ್.ಎಂ. ಹುಂಡೇಕಾರ, ಆನಂದ ಅವಟಿ ಇದ್ದರು. ರಾಜಶೇಖರ ಮೇತ್ರಿ ಸ್ವಾಗತಿಸಿ ನಿರೂಪಿಸಿದರು, ಅಶೋಕ ಬಳಬಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.