ADVERTISEMENT

‘ಪ್ರಜಾವಾಣಿ ಜ್ಞಾನ ಕೋಶ’

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2014, 6:18 IST
Last Updated 2 ಸೆಪ್ಟೆಂಬರ್ 2014, 6:18 IST

ಸಿಂದಗಿ: ‘ಪ್ರಜಾವಾಣಿ  ಒಂದು ಜ್ಞಾನಕೋಶ, ಮಾಹಿತಿ ಕಣಜ, ಇದೊಂದು ವಿಶ್ವವಿದ್ಯಾಲಯ, ಶಾಲಾ ಮಕ್ಕಳ ಕೈದೀವಿಗೆ. ಈ ಪತ್ರಿಕೆ ಓದಿದರೆ ಐ.ಎ.ಎಸ್, ಕೆ.ಎ.ಎಸ್, ಐ.ಪಿ.ಎಸ್ ದಂಥ  ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅತ್ಯಂತ ಸರಳವಾಗಿ ಪಾಸು ಮಾಡಬಹುದು’ ಎಂದು ಪ್ರಜಾವಾಣಿ ಓದುಗರು ಪ್ರತಿಕ್ರಿಯಿಸಿದ್ದು ಹೀಗೆ.

ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕುವೆಂಪು ಪಿಯುಸಿ ಸ್ಟಡಿ ಸರ್ಕಲ್ ಸಹಯೋಗದಲ್ಲಿ ಪ್ರಜಾವಾಣಿ ಬಳಗ ಏರ್ಪಡಿಸಿದ್ದ ಓದುಗರ ಸಮಾವೇಶದಲ್ಲಿ ಸಾಹಿತಿ ಡಾ.ಬಿ.ಆರ್.ನಾಡಗೌಡ, ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ, ಪ್ರಾಚಾರ್ಯ ಎ.ಎಸ್.ಬಿರಾದಾರ, ವಿದ್ಯಾರ್ಥಿಗಳಾದ ಬಿ.ಎಂ.ಪರಗೊಂಡ, ಎಸ್.ಸಿ.ಹಿರೇಮಠ, ರಾಜೂ ಹಿರೇಕುರುಬರ, ಭಾಗ್ಯಶ್ರೀ ಹೂಗಾರ, ಶಿವಾನಂದ ಈಶ್ವರಪ್ಪಗೋಳ ಮಾತನಾಡಿದರು.

ಪ್ರಜಾವಾಣಿ ಸಮೀಕ್ಷಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಕುವೆಂಪು ಪಿಯುಸಿ ಸ್ಟಡಿ ಸರ್ಕಲ್ ಸಂಚಾಲಕ ಮಹೇಶ ದುತ್ತರಗಾಂವಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಜಾವಾಣಿ ಅತ್ಯಂತ ಉಪಯುಕ್ತವಾದ ಮಾರ್ಗದರ್ಶಿ ದಿನ ಪತ್ರಿಕೆ ಎಂದು ಪ್ರಶಂಸಿದರು.

ಸಮೀಕ್ಷಾ ಸಪ್ತಾಹದ ಅಂಗವಾಗಿ ನಡೆ­ಸಿದ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳ ಗಳಿಸಿದ ಬಿ.ಎಂ.­ಪರಗೊಂಡ(ಪ್ರಥಮ),
ಜೆ.ಸಿ.ಬಿರಾದಾರ(ದ್ವಿತೀಯ), ಆರ್.ಟಿ.ವಡ್ಡೋಡಗಿ, ಬಿ.ಎಸ್.ತಳವಾರ(ತೃತಿಯ) ಬಹುಮಾನ ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ನಗರ ಪ್ರಜಾವಾಣಿ ವಿತರ­ಕರಾದ ನಿಂಗಣ್ಣ ಯಾಳಗಿ, ಆರ್.ಆರ್.ಪಾಟೀಲ, ಶ್ರವಣಕುಮಾರ ಅಗಸರ ಇವರನ್ನು ಸನ್ಮಾನಿಸ­ಲಾಯಿತು.

ಸಮಾರಂಭದಲ್ಲಿ ಪಾಲ್ಗೊಂಡ ಸಭಿಕರ ಜೊತೆ ಪ್ರಜಾವಾಣಿ ಕುರಿತಾಗಿ ಅತ್ಯುತ್ತಮ ಸಂವಾದ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ಎ.ಸಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ ಪ್ರಾಸ್ತಾವಿಕವಾಗಿ ಮಾತ­ನಾಡಿದರು.

ಎಸ್.ಸಿ.­ಬಿರಾದಾರ ಸ್ವಾಗತಿಸಿದರು. ಶರಣ­ಬಸವ ಭೈರಡ್ಡಿ ನಿರೂಪಿಸಿದರು. ಆರ್.ಬಿ.ದೊಡಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.