ADVERTISEMENT

‘203 ಕೆರೆ ತುಂಬುವ ಯೋಜನೆ ಅನುಷ್ಠಾನ’

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:55 IST
Last Updated 17 ಮೇ 2017, 6:55 IST

ವಿಜಯಪುರ: ಜಿಲ್ಲೆಯ 203 ಕೆರೆಗಳನ್ನು ನದಿ ಮೂಲದ ನೀರಿನಿಂದ ತುಂಬಿಸುವ ಯೋಜನೆ ರೂಪಿಸಿದ್ದು, ಮುಂಬರುವ ಡಿಸೆಂಬರ್‌ನೊಳಗೆ ಅನುಷ್ಠಾನಗೊಳಿಸ ಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ 60 ಕೆರೆ ಗಳನ್ನು ವಿವಿಧ ಯೋಜನೆಗಳಡಿ ತುಂಬಿ ಸಲಾಗುತ್ತಿದೆ. ಸದ್ಯ 33 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಹೊಸದಾಗಿ ವಿಜಯಪುರ ತಾಲ್ಲೂಕಿನ 29, ಇಂಡಿ ತಾಲ್ಲೂಕಿನ 11, ಸಿಂದಗಿ ತಾಲ್ಲೂಕಿನ 21, ಬಸವನಬಾಗೇವಾಡಿ ತಾಲ್ಲೂಕಿನ 30, ಮುದ್ದೇಬಿಹಾಳ ತಾಲ್ಲೂಕಿನ 19 ಕೆರೆಗಳನ್ನು ತುಂಬಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 1, 2 ಮತ್ತು 3ರ ಅಚ್ಚುಕಟ್ಟು ವ್ಯಾಪ್ತಿ ಯಲ್ಲಿ ಬರುವ ಸಣ್ಣ ನೀರಾವರಿ, ಜಿಲ್ಲಾ ಪಂಚಾಯ್ತಿ ಕೆರೆಗಳನ್ನು ತುಂಬಿ ಸಲು ಅವಶ್ಯಕವಿರುವ ವಿತರಣಾ ಕಾಲುವೆ, ಲ್ಯಾಟರಲ್, ಮೈನರ್ ನಿರ್ಮಾಣ ಕಾಮ ಗಾರಿ ಕೈಗೆತ್ತಿಕೊಳ್ಳಲು ಜಲ ಸಂಪನ್ಮೂಲ ಇಲಾಖೆ ಮಂಜೂರಾತಿ ನೀಡಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಮುಳವಾಡ ಏತ ನೀರಾವರಿ ಯೋಜನೆ: ವಿಜಯಪುರ ಮುಖ್ಯ ಕಾಲುವೆಯಿಂದ ದೇವರಹಿಪ್ಪರಗಿ, ದೇವೂರ, ಮಣೂರ, ಪಡಗಾನೂರ, ರಾಮತೀರ್ಥ, ದೇವರ ಹಿಪ್ಪರಗಿ ಸೈಟ್- 3, ಮಲಘಾಣ ಪಶ್ಚಿಮ ಕಾಲುವೆಯಿಂದ ಮಸೂತಿ, ಮಲಘಾಣ ಹೊಸ, ಉಪ್ಪಲದಿನ್ನಿ, ತೊದಲಬಾಗಿ ಕೆರೆಗಳಿಗೆ ನೀರು ತುಂಬಿಸಲಾಗುವುದು.

ಮನಗೂಳಿ ಶಾಖಾ ಕಾಲುವೆಯಿಂದ ಮಲಘಾಣ, ತಳೇವಾಡ ಇಂಗು ಕೆರೆ, ಮುತ್ತಗಿ, ಉಕ್ಕಲಿ. ಬಬಲೇಶ್ವರ ಶಾಖಾ ಕಾಲುವೆಯಿಂದ ಕಾಖಂಡಕಿ ಕೆರೆ, ಹೂವಿನ ಹಿಪ್ಪರಗಿ ಶಾಖಾ ಕಾಲುವೆ ಯಿಂದ ಕೊಡಗಾನೂರ ಕೆರೆ, ಅಲ ಕೊಪ್ಪರ, ಗುಂಡಕರ್ಜಗಿ, ವಡವಡಗಿ, ಸಂಖನಾಳ ಶಾಖಾ ಕಾಲುವೆಯಿಂದ ಹೂವಿನಹಿಪ್ಪರಗಿ, ಅಗಸಬಾಳ ಗೂಗಿ ಕೆರೆ, ಕಾಗಿಕೆರೆ ತುಂಬಿಸಲಾಗುವುದು. ಚಿಮ್ಮಲಗಿ ಏತ ನೀರಾವರಿ ಯೋಜನೆ, ಮಲ್ಲಾಬಾದ ಏತ ನೀರಾ ವರಿ, ಜೆ.ಬಿ.ಸಿ ಯೋಜನೆಯಡಿ ಭೀಮಾ ಫ್ಲ್ಯಾಂಕ್ ಯೋಜನೆಯಡಿಯಲ್ಲಿಯೂ ಕೆರೆ ತುಂಬಲಾಗುತ್ತಿದೆ.

ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಕೆರೆಗಳ ತುಂಬುವಿಕೆಯಿಂದ ಸುತ್ತಮುತ್ತಲ ಗ್ರಾಮ ಗಳ ಕುಡಿವ ನೀರಿನ ಬವಣೆ ನೀಗಿಸಲು, ಅಂತರ್ಜಲ ಅಭಿವೃದ್ಧಿಗೊಳಿಸಿ ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಲು, ನೀರಾವರಿ ಸೌಕರ್ಯ ಹೆಚ್ಚಿಸುವ ನಿಟ್ಟಿ ನಲ್ಲಿ ಒಂದು ಶಾಶ್ವತ ಪರಿಹಾರಕ್ಕೆ ಕಾರಣ ವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ- 3ರಡಿ ಮುಳವಾಡ, ಚಿಮ್ಮಲಗಿ, ಹೆರ ಕಲ್ ಏತ ನೀರಾವರಿ ಯೋಜನೆ ಹಾಗೂ ಹಂತ -1 ಮತ್ತು 2ರಡಿ ಬರುವ ಆಲ ಮಟ್ಟಿ ಎಡದಂಡೆ ಕಾಲುವೆಯಡಿ ಬರುವ ಒಟ್ಟು 38 ಜಿ.ಪಂ. ಕೆರೆ ತುಂಬಿಸಲು ಅವಶ್ಯವಿರುವ ವಿತರಣಾ ಹಾಗೂ ಲ್ಯಾಟ ರಲ್ ಕಾಮಗಾರಿ ಕೈಗೊಳ್ಳಲು 54.10 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲು ಅನುಮೋದನೆ ದೊರಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.