ADVERTISEMENT

ಅಂಬಿಗರ ಚೌಡಯ್ಯ ಜ್ಯೋತಿಯಾತ್ರೆಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 22 ಮೇ 2017, 5:54 IST
Last Updated 22 ಮೇ 2017, 5:54 IST

ಯಾದಗಿರಿ: ಕೋಲಿ ಸಮಾಜದ ವಿಭಾಗೀಯ ಸಮಾವೇಶ ಅಂಗವಾಗಿ ಭಾನುವಾರ ನಗರಕ್ಕೆ ಬಂದ ಅಂಬಿಗರ ಚೌಡಯ್ಯ ಜ್ಯೋತಿಯಾತ್ರೆಯನ್ನು  ಸ್ವಾಗತಿಸಲಾಯಿತು.
ಬೆಳಿಗ್ಗೆ ಯಾನಾಗುಂದಿಯಿಂದ ಯಾತ್ರೆ ಆರಂಭಗೊಂಡು ಗುರುಮಠಕಲ್ ಮಾರ್ಗವಾಗಿ ನಗರಕ್ಕೆ ಬಂತು. ಯುವಕರು ಬೈಕ್ ರ್‍್ಯಾಲಿಯ ಮೂಲಕ ಹೈದರಾಬಾದ್ ರಸ್ತೆಯ ಗಂಜ್ ವೃತ್ತದ ಬಳಿ ಜ್ಯೋತಿಯಾತ್ರೆಯನ್ನು ಸ್ವಾಗತಿಸಿದರು.

ಟೋಕ್ರೆ ಕೋಲಿ ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ಉಮೇಶ ಕೆ. ಮುದ್ನಾಳ ಮಾತನಾಡಿ, ‘ಈ ಹಿಂದೆ ರಾಜ್ಯದಾದ್ಯಂತ ವಿಠಲ ಹೇರೂರು ಜ್ಯೋತಿಯಾತ್ರೆಗೆ ಚಾಲನೆ ನೀಡಿದ್ದರು. ಇದೀಗ ಸಮಾಜದಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಜಾಗೃತಿ ಮೂಡಿಸಲು ಜ್ಯೋತಿಯಾತ್ರೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದರು.

‘ಬೀದರ್‌ನಲ್ಲಿ ಮೇ 28ಕ್ಕೆ ವಿಭಾಗಮಟ್ಟದ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜ್ಯೋತಿಯಾತ್ರೆ ಹೈದರಾಬಾದ್ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದೆ’ ಎಂದು ಅವರು ತಿಳಿಸಿದರು.

ADVERTISEMENT

ಯಾತ್ರೆಯಲ್ಲಿ ಎಸ್.ಪಿ.ಕಟ್ಟಿಮನಿ, ಮಲ್ಲಿಕಾರ್ಜುನ ಕೌಳೂರು, ವೆಂಕಟೇಶ , ನಾಗಪ್ಪ , ಸಿದ್ದಪ್ಪ ನಾಲ್ವಡಿಗಿ, ಕಾಶಪ್ಪ , ರಾಮು , ಅನಿಲ್ , ವೆಂಕಟೇಶ, ಮರೆಪ್ಪ ತಾಯಪ್ಪ ಮಹಾದೇವ ಇದ್ದರು. ಬೈಕ್‌ ರ್‍್ಯಾಲಿಯಲ್ಲಿ ಅಂಬಿಗರ ಚೌಡಯ್ಯನ ಯುವಕ ಸಂಘದ ಪದಾಧಿಕಾರಿಗಳು, ಸೇರಿದಂತೆ ಸಮಾಜದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.