ADVERTISEMENT

‘ಅಂಬೇಡ್ಕರ್‌ ಭವನಕ್ಕೆ ₹ 1.10 ಕೋಟಿ ಪ್ರಸ್ತಾವ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 10:07 IST
Last Updated 15 ಏಪ್ರಿಲ್ 2017, 10:07 IST

ಸುರಪುರ: ನಗರದ ಬುದ್ಧ ವಿಹಾರದ ಬಳಿ ನಿರ್ಮಾಣ ಹಂತದಲ್ಲಿರುವ ಡಾ. ಅಂಬೇಡ್ಕರ್ ಭವನಕ್ಕೆ ₹ 1.10 ಕೋಟಿ ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.

ತಹಶೀಲ್ದಾರ್‌ ಕಚೇರಿಯ ಆವರಣ ದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಡಾ. ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಅವರು ಮಾತ ನಾಡಿದರು.‘ಡಾ. ಅಂಬೇಡ್ಕರ್‌ ಅವರ ಪ್ರಯ ತ್ನದ ಫಲವಾಗಿ ದಲಿತರು, ಹಿಂದುಳಿದ ವರು ಮತ್ತು ಅಲ್ಪ ಸಂಖ್ಯಾತರು ಉನ್ನತ ಶಿಕ್ಷಣ, ಹುದ್ದೆ, ರಾಜಕೀಯ ಅಧಿಕಾರ ಸೇರಿದಂತೆ ಯಾವುದೇ ತಾರತಮ್ಯ ವಿಲ್ಲದೆ ಸಮಾನ ಶಿಕ್ಷಣ ಪಡೆಯಲು ಸಾಧ್ಯವಾಗಿದೆ’ ಎಂದರು.

‘ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರ ಮೀಸಲಾತಿ ಕಲ್ಪಿಸಿಲ್ಲ. ಹಿಂದುಳಿದಿರುವ ಎಲ್ಲಾ ವರ್ಗಗಳಿಗೂ ಮೀಸಲಾತಿ ನೀಡಿದ್ದಾರೆ. ದೇಶದ ಬಹು ಸಂಖ್ಯಾತ ಜನರ ಪಾಲಿಗೆ ಅಂಬೇಡ್ಕರ್‌ ದೇವರಿದ್ದಂತೆ’ ಎಂದರು.

ADVERTISEMENT

ಉಪನ್ಯಾಸಕ ವಿಜಯಕುಮಾರ ಸಾಲಿಮನಿ ಮಾತನಾಡಿ, ಸಂವಿಧಾನ ದಲ್ಲಿ ದಲಿತರಿಗೆ ಹೆಚ್ಚು ಪ್ರಾಶಸ್ತ್ಯ ನೀಡ ಲಾಗಿದೆ. ಅವರಿಗಾಗಿಯೇ ಸಂವಿಧಾನ ರಚಿಸಲಾಗಿದೆ ಎಂದು ಕೆಲವರು ಸಂವಿ ಧಾನ ಮತ್ತು ಅಂಬೇಡ್ಕರ್‌ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನಕ್ಕೆ ತಿದ್ದಪಡಿ ತರುವ ನೆಪದಲ್ಲಿ ಸಂವಿಧಾನ ಬೇರುಗಳನ್ನು ಕತ್ತರಿಸುತ್ತಾ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರನ್ನು ಹತ್ತಿಕ್ಕುವ ರಾಜಕೀಯ ಷಡ್ಯಂತ್ರ ನಡೆ ದಿದೆ ಎಂದರು.

ಅಂಬೇಡ್ಕರ್ ಕೇವಲ ದಲಿತರಿಗಾಗಿ ಸಂವಿಧಾನ ರಚಿಸಲಿಲ್ಲ. ದೇಶದ ಬಹು ಸಂಖ್ಯಾತರ ಅಭಿವೃದ್ದಿಗಾಗಿ ಸಂವಿಧಾನ ರಚಿಸಿದರು. ಪರಿಶಿಷ್ಟ ಜಾತಿ, ಜನಾಂಗಕ್ಕೆ ಅವರು ಅವಕಾಶ ನೀಡಿದ್ದು ಕೇವಲ ಶೇ 12ರಷ್ಟು ಮಾತ್ರ. ಓಬಿಸಿಗಳಿಗೆ ಶೇ 32ರಷ್ಟು ನೀಡಿ ಉಳಿದ ಜಾತಿಗೆ ಶೇ 55 ರಷ್ಟು ಮೀಸಲಾತಿ ನೀಡಿದ್ದಾರೆ’ ಎಂದು ವಿವರಿಸಿದರು.
ನಗರಸಭೆ ಅಧ್ಯಕ್ಷೆ ಕವಿತಾ ಶಿವ ಕುಮಾರ ಎಲಿಗಾರ, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಸೂಗೂ ರೇಶ ವಾರದ, ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಸಮಾಜ ಕಲ್ಯಾಣಾಧಿಕಾರಿ ಬಸವರಾಜ ಇನಾಂದಾರ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಬಸ್ ನಿಲ್ದಾಣದ ಬಳಿ ಡಾ. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾಲಾರ್ಪಣೆ ಮಾಡಿ, ಮೆರವಣಿಗೆಗೆ ಚಾಲನೆ ನೀಡಿದರು, ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಅಂಬೇಡ್ಕರ್‌ ಭಾವಚಿತ್ರ ಸಹಿತ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.