ADVERTISEMENT

‘ಆತ್ಮದ ವ್ಯವಸ್ಥಿತ ಅಧ್ಯಯನವೇ ಅಧ್ಯಾತ್ಮ’

​ಪ್ರಜಾವಾಣಿ ವಾರ್ತೆ
Published 16 ಮೇ 2017, 9:19 IST
Last Updated 16 ಮೇ 2017, 9:19 IST

ಸುರಪುರ: ‘ಆತ್ಮದ ವ್ಯವಸ್ಥಿತ ಅಧ್ಯಯನವೇ ಅಧ್ಯಾತ್ಮವಾಗಿದೆ. ಇಂದಿನ ಜಂಜಡ ಯುಗದಲ್ಲಿ ಅಧ್ಯಾತ್ಮ  ಮಾತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅಧ್ಯಾತ್ಮ ಕುರಿತು ಹೆಚ್ಚಿನ ಪುಸ್ತಕಗಳು ಹೊರಬರುವ ಅವಶ್ಯವಿದೆ. ಸಾಹಿತಿ ಸಜ್ಜನ್‌ ಈ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಮಾಡಿದ್ದಾರೆ’ ಎಂದು ವಾಗಣಗೇರಿಯ ಕಡಕೋಳ ಮಡಿವಾಳೇಶ್ವರ ಶಾಖಾ ಮಠದ ಬಸಣ್ಣ ಶರಣ ಹೇಳಿದರು.

ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದಲ್ಲಿ ಭಾನುವಾರ ಸಾಹಿತಿ ಎಂ.ಎಸ್.ಸಜ್ಜನ್‌ ಅವರ ‘ಜೀವನ ವಿಕಾಸ’ ಮತ್ತು ‘ಸಾಹಿತ್ಯ ಚಿಂತನ’ ಎಂಬ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ಪಂಚಾಚಾರ, ಷಟಸ್ಥಲಗಳ ಬಗ್ಗೆ ಕೃತಿಯಲ್ಲಿ ಸರಳವಾಗಿ ವಿವರಿಸಲಾಗಿದೆ. ಅಲ್ಲದೆ ಮನುಷ್ಯನಿಗೆ ಅವಶ್ಯವಿರುವ ಅಧ್ಯಾತ್ಮ ಮತ್ತು ಅನುಭಾವವನ್ನು ಈ ಕೃತಿಗಳು ನೀಡಲಿದ್ದು ಮನುಷ್ಯಜೀವನ ವಿಕಾಸಕ್ಕೆ ಸಹಕಾರಿಯಾಗಿವೆ. ಓದುಗರಿಗೆ ಖಂಡಿತ ಪುಸ್ತಗಳು ಇಷ್ಟವಾಗುತ್ತವೆ’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ, ‘ಕನ್ನಡ ನಾಡಿಯಲ್ಲಿ ಇಂದು ಕನ್ನಡ ಭಾಷೆಯ ಅಭಿಮಾನ ಕಡಿಮೆ ಯಾಗುತ್ತಿದೆ’ ಎಂದರು.

ನಿವೃತ್ತ ಶಿಕ್ಷಕ ಜನಾರ್ದನ ವಿಭೂತೆ ಮಾತನಾಡಿ, ‘ಕನ್ನಡ ಸಾಹಿತ್ಯ ಲೋಕಕ್ಕೆ ಸಜ್ಜನ್‌ ಅವರ ಕೊಡುಗೆ ಅಪಾರ ವಾಗಿದೆ, ಅವರಿಂದ ಇನ್ನೂ ಹೆಚ್ಚೆಚ್ಚು ಇಂತಹ ಕೃತಿಗಳು ಹೊರಬರಲಿ’ ಎಂದು ಆಶಿಸಿದರು.

ಯುವ ಸಾಹಿತಿ ಶಿವಕುಮಾರ ಅಮ್ಮಾಪುರ, ಶಾಂತವೀರ ಸಜ್ಜನ್‌ ಲೇಖಕರ ಕುರಿತು ಮಾತನಾಡಿದರು, ಸಾಹಿತ್ಯ ಸಂಘದ ಕಾರ್ಯದರ್ಶಿ ಶಾಂತಪ್ಪ ಬೂದಿಹಾಳ ಅಧ್ಯಕ್ಷತೆ ವಹಿಸಿದ್ದರು. ಶ್ರೀಹರಿರಾವ ಆದವಾನಿ ನಾಡಗೀತೆ ಹಾಡಿದರು. ಸೋಮಶೇಖರ ಶಾಬಾದಿ ಸ್ವಾಗತಿಸಿದರು, ಮುದ್ದಪ್ಪ ಅಪ್ಪಾಗೋಳ ನಿರೂಪಿಸಿದರು.

ಹಿರಿಯ ಸಾಹಿತಿ ಎ.ಕೃಷ್ಣ, ಕೆ. ವೀರಪ್ಪ, ನಬಿಲಾಲ ಮಕಾನದಾರ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ  ಶ್ರೀನಿವಾಸ ಜಾಲ ವಾದಿ, ಸಂಗಣ್ಣ ಎಕ್ಕೆಳ್ಳಿ, ಶಿವರಾಜಪ್ಪ ಗೋಲಗೇರಿ, ಬಸವರಾಜಪ್ಪ ನಿಷ್ಠಿ ದೇಶಮುಖ, ಬಸವರಾಜ ಜಮದ್ರ ಖಾನಿ, ಅಮರೇಶ ಗೋಗಿ, ಹನು ಮಂತಪ್ಪ ವಕೀಲ, ಭೀಮಣ್ಣ ರತ್ತಾಳ, ಜನಾರ್ದನ್‌ ಪಾಣಿಭಾತೆ, ಅಮರೇಶ ಕುಂಬಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.