ADVERTISEMENT

ಕೋಲಿ ಸಮಾಜದ ಪ್ರತಿಭಟನೆ

ಗಂಗಾಮತ ಕೋಲಿ ಸಮಾಜದ ಮೇಲಿನ ದೌರ್ಜನ್ಯಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 10:35 IST
Last Updated 25 ಜುಲೈ 2017, 10:35 IST

ಗುರುಮಠಕಲ್: ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮುದನೂರಿನಲ್ಲಿ ಈಚೆಗೆ ನಡೆದ ಕೋಲಿ ಸಮಾಜದ ಮೂವರ ಹತ್ಯೆಯನ್ನು ಖಂಡಿಸಿ ಸೋಮವಾರ ಪಟ್ಟಣದಲ್ಲಿ ಕೋಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಗಾಂಧಿ ಮೈದಾನದಿಂದ ವಿಶೇಷ ತಹಶೀಲ್ದಾರ ಕಚೇರಿವರೆಗೆ  ಪ್ರತಿಭಟನಾ ಮೆರವಣಿಗೆ ನಡೆಸಿ ವಿಶೇಷ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಮುದನೂರಿನಲ್ಲಿ ಕೋಲಿ ಸಮಾಜಕ್ಕೆ ಸೇರಿದ ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಯಿಂದ ಸಮಾಜದಲ್ಲಿ ಅಭದ್ರತೆ ಕಾಡುತ್ತಿದೆ. ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸಂತ್ರಸ್ತ ಕುಟುಂಬದಲ್ಲಿನ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಕೊಲೆಗೀಡಾದವರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಮಾತನಾಡಿದ ಗಂಗಾಮತ ಕೋಲಿ ಸಮಾಜದ ಗುರುಮಠಕಲ್ ಘಟಕದ ಅಧ್ಯಕ್ಷ ವೀರಪ್ಪ ಪಡಿಗೆ, ಕೋಲಿ ಸಮಾಜದ ಜನರ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯ ಪ್ರಕರಣ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ಸಮಾಜವು ಖಂಡಿಸುತ್ತದೆ ಎಂದು ಹೇಳಿದರು.

ಗಂಗಾಮತ ಕೋಲಿ ಸಮಾಜದ ಉಪಾಧ್ಯಕ್ಷ ಲಕ್ಷ್ಮಪ್ಪ ಮಜ್ಜಿಗೆ, ಖಜಾಂಚಿ ಕಾಶಪ್ಪ, ಕಿಷ್ಟಪ್ಪ ಪಿಟ್ಟಲ್, ಹಣಮಂತು, ಸಾಯಿಬಣ್ಣ ಬೋರಬಂಡಾ, ರಾಮುಲು ಕೊಡಗಂಟಿ, ಭೀಮಶಪ್ಪ ಪ್ಯಾಟ್ಲಾ, ವೆಂಕಟಪ್ಪ ಮನ್ನೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.