ADVERTISEMENT

ಚಿನ್ನಾಕಾರ: ಸ್ವಚ್ಛತಾ ಅಭಿಯಾನ ಆರಂಭ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 6:21 IST
Last Updated 19 ಸೆಪ್ಟೆಂಬರ್ 2017, 6:21 IST

ಗುರುಮಠಕಲ್: ಸಮೀಪದ ಚಿನ್ನಾಕಾರ ಗ್ರಾಮದಲ್ಲಿ ಕಲಿಕೆ ಟಾಟಾ ಟ್ರಸ್ಟ್ ಹಾಗೂ ಜಿಲ್ಲಾ ಪಂಚಾಯಿತಿ ಯಾದಗಿರಿ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ, ಶೌಚಾಲಯ ನಿರ್ಮಾಣ ಹಾಗೂ ಬಳಕೆಯ ಕುರಿತ ಜಾಗೃತಿ ಕಾರ್ಯಕ್ರಮ ಶನಿವಾರ ಜರುಗಿತು.

ಟಾಟಾ ಟ್ರಸ್ಟ್ ಸಂಯೋಜಕಿ ಅನ್ನಪೂರ್ಣ ಘಟನಟ್ಟಿ ಮಾತನಾಡಿ, ‘ಜಿಲ್ಲಾ ಪಂಚಾಯಿತಿಯ ಸಹಯೋಗ ದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜ ನೆಗೆ ಪೂರಕವಾಗಿ ಕಲಿಕೆ ಟಾಟಾ ಟ್ರಸ್ಟ್ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದೆ. ಚಿನ್ನಾಕಾರ ಗ್ರಾಮದಲ್ಲಿ 110ನೇ ಕಾರ್ಯಕ್ರಮ ಜರುಗುತ್ತಿದೆ. ಗ್ರಾಮಸ್ಥರಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ’ ಎಂದರು.

‘ಸರ್ಕಾರದ ಯೋಜನೆಗಳ ಸದುಪ ಯೋಗ ಪಡೆದು ಶೌಚಾಲಯಗಳನ್ನು ನಿರ್ಮಿಸಿಕೊಂಡರೆ ಆರೋಗ್ಯಯುತವಾಗಿ ಉತ್ತಮವಾಗಿರುತ್ತೇವೆ. ನಮ್ಮ ಆರೋಗ್ಯ ಚೆನ್ನಾಗಿದ್ದರೆ ನಮ್ಮ ಜೀವನ ಸುಖಮಯವಾಗಲಿದೆ. ಬಯಲುಶೌಚದಿಂದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಉಂಟಾಗುವ ಮುಜುಗರ ಹಾಗೂ ಇತರೆ ಉಪಟಳಗಳನ್ನು ತಪ್ಪಿಸುವುದು ಹಾಗೂ ಉತ್ತಮ ಆರೋಗ್ಯವನ್ನು ಪಡೆಯಲು ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಗ್ರಾಮಸ್ಥರಿಗೆ ಶೌಚಾಲಯ ನಿರ್ಮಾಣಕ್ಕಾಗಿ ಜಾರಿಗೆ ತಂದ ಯೋಜನೆಗಳ ಮಾಹಿತಿ, ವಿವಿಧ ಮಾದರಿಯ ವೈಯಕ್ತಿಕ ಶೌಚಾಲಯಗಳ ಚಿತ್ರಪ್ರದರ್ಶನ ಹಾಗೂ ಶೌಚಾಲಯದ ನಿರ್ಮಾ ಣದ ಕುರಿತು ಜಾಗೃತಿ ಮೂಡಿಸುವ ಆಟಗಳನ್ನು ಆಡಲಾಯಿತು.

ಹಿರಿಯ ಕಾರ್ಯಕ್ರಮ ಸಂಯೋಜಕಿ ರೋಹಿಣಿ ಕಲಶೆಟ್ಟಿ, ಸಂಯೋಜಕರಾದ ರೇವಣಸಿದ್ದಪ್ಪ, ವಿಠಲ ಬಾರಾಗಣಿ, ಫಯಾಜ್ ಕಳ್ಳಿ, ಕಲಿಕಾ ಟ್ರಸ್ಟ್ ಸ್ವಯಂ ಸೇವಕರಾದ ಪ್ರವೀಣ, ನಾಗರಾಜ, ರಘುಪತಿ, ಮಾರುತಿ, ನವೀನ ಕುಮಾರ, ಇಮ್ರಾನ್, ಮಾರುತಿ, ಗ್ರಾ.ಪಂ ಕಾರ್ಯದರ್ಶಿ ಶರಣಪ್ಪ ಚೌವಾಣ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.