ADVERTISEMENT

ಬೆಳೆಹಾನಿ ಪ್ರದೇಶಗಳಿಗೆ ಮಾಲಕರಡ್ಡಿ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 12:07 IST
Last Updated 6 ಏಪ್ರಿಲ್ 2018, 12:07 IST

ಯಾದಗಿರಿ: ಇತ್ತೀಚೆಗೆ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗುಂಡ್ಲೂರ, ಶಿವಪುರ, ಗೋನಾಲ, ಜೋಳದಡಗಿ, ಅಗ್ನಿಹಾಳ, ಕೊಂಗಂಡಿ ಗ್ರಾಮಗಳಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ನೂರಾರು ಎಕರೆ ಭತ್ತದ ಬೆಳೆಹಾನಿ ಉಂಟಾಗಿದ್ದ ಪ್ರದೇಶಗಳಿಗೆ ಗುರುವಾರ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳೆಹಾನಿ ಆಗಿರುವುದನ್ನು ಖುದ್ದಾಗಿ ಕಂಡ ಶಾಸಕರು ರೈತರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಮೊಬೈಲ್‌ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿದರು. ಮಾಜಿ ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ, ಬಸವರಾಜಪ್ಪಗೌಡ ವಡಗೇರಾ, ಡಾ.ಸುಭಾಷ್ ಕರಣಗಿ, ಸಿದ್ದಲಿಂಗರಡ್ಡಿ ಉಳ್ಳೆಸೂಗೂರು, ಅಶೋಕರಡ್ಡಿ ಗೋನಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT