ADVERTISEMENT

ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ

ಶಹಾಪುರದಲ್ಲಿ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 6:23 IST
Last Updated 18 ಫೆಬ್ರುವರಿ 2017, 6:23 IST
ಶಹಾಪುರ: ಬಂಜಾರ ಸಮಾಜದವರು ಶ್ರಮ ಜೀವಿಗಳಾಗಿದ್ದಾರೆ. ಸಮಾಜದ ಜನ ಗುಳೆ ಹೋಗುವ ದೃಶ್ಯ  ಕಂಡು ನೋವಾ ಗುತ್ತದೆ  ಎಂದು ಮಹಾ ರಾಷ್ಟ್ರದ ಬಂಜಾರ ಕಾಶಿಯ ಶಕ್ತಿಪೀಠ ಪೌರಾದೇವಿಯ ಡಾ. ರಾಮರಾವ ಮಹಾರಾಜರು ಹೇಳಿದರು.
 
ಇಲ್ಲಿನ ಸಿಪಿಎಸ್ ಶಾಲಾ ಮೈದಾ ನದಲ್ಲಿ ಶುಕ್ರವಾರ ಸಂತ ಸೇವಾಲಾಲ ಮಹಾರಾಜ ಅವರ 278ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಂಗ ವಾಗಿ ನಡೆದ ಬಂಜಾರ ಜಾಗೃತಿ ಹಾಗೂ ಸಾಂಸ್ಕೃತಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
 
ಬಂಜಾರ ಸಮುದಾಯ ಶೈಕ್ಷಣಿಕ ವಾಗಿ ಅತ್ಯಂತ ಹಿಂದುಳಿದಿದೆ. ಪೋಷ ಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಹಿಸಬೇಕಿದೆ. ಸೇವಾ ಮನೋಭಾವದಿಂದ ಕಾಯಕ ಮಾಡ ಬೇಕು. ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಗೂ ಬದುಕು ಹಾಳು ಮಾಡಿಕೊಳ್ಳಬಾರದು ಎಂದರು.
 
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾದವ್‌  ಮಾತನಾಡಿ,  ಸಮಾಜದ ಜನ ಸಂಘಟಿತರಾಗಬೇಕು. ಆ ಮೂಲಕ ಬಂಜಾರ ಸಮುದಾಯದ ಶಕ್ತಿ ಪ್ರದರ್ಶಿಸಬೇಕು. ನ್ಯಾಯ ಯುತವಾಗಿ ಸಿಗಬೇಕಾದ ಅವ ಕಾಶಗಳನ್ನು ದಕ್ಕಿಸಿಕೊಳ್ಳಲು ಹಿಂಜರಿಕೆ ಬೇಡ. ಪ್ರತಿ ತಾಲ್ಲೂಕು ಕೇಂದ್ರದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಸೇವಾಲಾಲ ಭವನ ನಿರ್ಮಿಸಲಾಗುವುದು ಎಂದರು.
 
ಶಾಸಕ ಗುರು ಪಾಟೀಲ್ ಶಿರವಾಳ ಹಾಗೂ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಶಹಾಪುರ ನಗರದಲ್ಲಿ ಬಂಜಾರ ಸಮಾಜದ ಶಕ್ತಿ ಪ್ರದರ್ಶನಗೊಂಡಿದೆ. ತಾಂಡಾಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡ ಬೇಕು. ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಹಾಗೂ ಉದ್ಯೋಗ ಮುಖ್ಯ ವಾಗಿದೆ ಎಂದರು.
 
ಜೆಡಿಎಸ್‌ ಮುಖಂಡ ಶರಣಪ್ಪ ಸಲಾದಪುರ, ಕಾಂಗ್ರೆಸ್ ಮುಖಂಡರಾದ ಬಸವರಾಜಪ್ಪಗೌಡ ದರ್ಶನಾಪುರ, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಜಿಲ್ಲಾ ಪಂಚಾಯಿತಿ ಸದಸ್ಯ ಕಿಶನ ರಾಠೋಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಲೀಂ ಸಂಗ್ರಾಮ್, ಮಾನಸಿಂಗ ಚವ್ಹಾಣ, ದೇವರಾಜ ನಾಯಕ,  ರೇಖು ಚವ್ಹಾಣ, ಲೊಕೋಶ, ರಾಠೋಡ, ಶಿವರಾಮ ಚವ್ಹಾಣ,   ಸುಭಾಸ ರಾಠೋಡ, ವಿಠಲ ಜಾದವ, ಬಸವರಾಜ ರಾಠೋಡ, ರಾಜು ಚಾಮನಾಳ, ತಿಪ್ಪಣ್ಣ ಚವ್ಹಾಣ, ಚಂದ್ರಶೇಖರ ರಾಠೋಡ, ರವಿ ರಾಠೋಡ, ಮೇಘರಾಜ ಜಾದವ,  ರಾಣಾ ಪ್ರತಾಪ ಸಿಂಗ್, ವೆಂಕಪ್ಪ ರಾಠೋಡ, ಜನಾರ್ಧನ ಯಾದಗಿರಿ, ರಾಜು ಚವ್ಹಾಣ, ಹೊನ್ನಪ್ಪ ಕನ್ಯಾಕೊಳ್ಳುರ, ಲಲಿತಾ ಪ್ರಕಾಶ ಚವ್ಹಾಣ, ಕಮಲಾ ಕಲಬುರ್ಗಿ ಇದ್ದರು.
 
ಬಂಜಾರ ಸಮಾಜದ ಶಕ್ತಿ ಪ್ರದರ್ಶನ
ಶಹಾಪುರ:
ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವ ನೆಪದಲ್ಲಿ ಶುಕ್ರವಾರ ಬಂಜಾರ ಸಮಾಜದ ಶಕ್ತಿ ಪ್ರದಶರ್ನಗೊಂಡಿತು. ಸುಮಾರು 3 ತಾಸಿಗೂ ಹೆಚ್ಚು ಕಾಲ ಭವ್ಯ ಮೆರವಣಿಗೆ ನಡೆಯಿತು. ತಾಲ್ಲೂಕಿನ ಪ್ರತಿ ತಾಂಡಾದಿಂದ ಕುಂಭಮೇಳ ಹಾಗೂ ನವರಾತ್ರಿ ಸಂದರ್ಭದಲ್ಲಿ ಘಟಕ್ಕೆ ಹಾಕುವ ರೀತಿ ಸಸಿಗಳನ್ನು ಸಿದ್ಧಪಡಿಸಿಕೊಂಡು ತಂದು ಡಾ.ರಾಮರಾವ  ಮಹಾರಾಜರಿಗೆ ಅರ್ಪಿಸಿ ಸಂಭ್ರಮಿಸಿದರು.

ಮಹಾರಾಜರ ಪಾದಸ್ಪರ್ಶಕ್ಕೆ ಹಾಗೂ ಆರ್ಶಿವಾದಕ್ಕೆ ಜನ ಮುಗಿ ಬಿದ್ದರು. ಎಲ್ಲೆಡೆ ಸೇವಾಲಾಲ ಮಹಾರಾಜ ಕೀ ಜೈ ಎನ್ನುವ ಘೋಷಣೆಗಳು ಮೊಳ ಗಿದವು.  ಬ್ಯಾನರ್, ಬಂಟಿಂಗ್‌ಗಳು ರಾರಾಜಿಸುತ್ತಿದ್ದವು. ದಟ್ಟಣೆ ಯಿಂದಾಗಿ ಬೀದರ್‌ –ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಕೆಲ ಕಾಲ ಅಸ್ತ ವ್ಯಸ್ತಗೊಂಡಿತ್ತು. ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
 
* ಬಂಜಾರ ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ತಾಂಡಾದಿಂದ ಗುಳೆ ಹೋಗುವ ಬದುಕು ಕೊನೆಗೊಳ್ಳಲಿ. ನಾಳೆ ನಮಗೂ ಉತ್ತಮ ದಿನ ಬರುತ್ತವೆ
-ಡಾ.ರಾಮರಾವ ಮಹಾರಾಜ, ಮಹಾರಾಷ್ಟ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.