ADVERTISEMENT

ಯರಗೋಳ: ಜೆಡಿಎಸ್‌ ಚಟುವಟಿಕೆ ಆರಂಭ

ಜೆಡಿಎಸ್‌ನ ಶರಣಗೌಡ ಕಂದಕೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 6:12 IST
Last Updated 17 ಏಪ್ರಿಲ್ 2017, 6:12 IST
ಯಾದಗಿರಿ: ‘ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ದೊಡ್ಡ ಗ್ರಾಮ ಯರಗೋಳ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಆದ್ದರಿಂದ ಪಕ್ಷದ ಚಟುವಟಿಯನ್ನು ಯರಗೋಳದಿಂದಲೇ ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನಕಾರ್ಯದರ್ಶಿ ಶರಣಗೌಡ ಕಂದಕೂರ ಹೇಳಿದರು.
 
ಸಮೀಪದ ಯರಗೋಳ ಗ್ರಾಮದಲ್ಲಿ ಭಾನುವಾರ ಜೆಡಿಎಸ್ ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
 
ಗುರುಮಠಕಲ್ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ‘ಬದಲಾವಣೆ ಕಡೆಗೆ ಜೆಡಿಎಸ್ ನಡಿಗೆ’ ಎಂಬ ಅನೇಕ ಉದ್ಘೋಷ ವಾಕ್ಯದೊಂದಿಗೆ ಪ್ರತಿ ಹಳ್ಳಿಯಲ್ಲೂ ಜಾಗೃತಿ ಮೂಡಿಸುವ ಯೋಜನೆ ಈಗಾಗಲೇ ಸಿದ್ಧವಾಗಿದೆ. ದಿನದಿಂದ ದಿನಕ್ಕೆ ಪಕ್ಷಕ್ಕೆ ಯುವಕರು ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಆನೆ ಬಲ ಬಂದಿದೆ’ ಎಂದರು. 
 
ಸುಭಾಶ್ಚಂದ್ರ ಹೊನಗೇರಾ, ತಾಲ್ಲೂಕು ಪಂಚಾಯಿತಿ ಸದಸ್ಯ ಈಶ್ವರ್ ನಾಯಕ್, ಅನಿಲ್ ಹೆಡಗಿಮದ್ರಾ, ಮಾರ್ತಾಂಡ ಮಾನೇಗಾರ, ರಾಜು ಉಡುಪಿ, ಬನ್ನಪ್ಪ ಸೈದಾಪುರ, ಶ್ರೀಕಾಂತ, ಭೀಮಾಶಂಕರ, ದೇವು ನಾಯಕ್, ಲಕ್ಷ್ಮಣ ನಾಯಕ ಕೂಡ್ಲೂರು, ರಾಘು ಗುತ್ತೇದಾರ, ನವೀನ್ ಅರಕೇರಾ, ಸಿದ್ದು ಅರಕೇರಾ, ಭೀಮರಾಯ ಕಂಚ ಗಾರಹಳ್ಳಿ, ಶರಣು ಮಲಕಪನಳ್ಳಿ, ಸಂಜು ಯರಗೋಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.