ADVERTISEMENT

ವಿದ್ಯುತ್ ಸ್ಪರ್ಶದಿಂದ ಗುಡಿಸಲಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:11 IST
Last Updated 23 ಏಪ್ರಿಲ್ 2017, 9:11 IST

ಶಹಾಪುರ: ತಾಲ್ಲೂಕಿನ ಪಿಂಜಾರ ದೊಡ್ಡಿಯಲ್ಲಿ ಶನಿವಾರ ವಿದ್ಯುತ್ ಸ್ಪರ್ಶ ದಿಂದ ಇಮಾಮಸಾಬ್ ಎಂಬುವರ  ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದ್ದು, ದವಸ ಧಾನ್ಯ, ₹1.11 ಲಕ್ಷ ನಗದು ಮತ್ತು 2 ತೊಲೆ ಬಂಗಾರ ಸುಟ್ಟು ಕರಕಲಾಗಿವೆ.ಉದ್ಯೋಗಕ್ಕೆ ಬೆಂಗಳೂರಿಗೆ ತೆರಳಿದ್ದ ಇಮಾಮ್‌ಸಾಬ್‌ ಕುಟುಂಬ ಸಮೇತ ಶನಿವಾರ ಸ್ವಗ್ರಾಮಕ್ಕೆ ಮರಳಿದ್ದರು. ಹಣ, ಚಿನ್ನ ಮತ್ತು ಅಗತ್ಯ ವಸ್ತುಗಳನ್ನು ಗುಡಿಸಲಿನಲ್ಲಿ ಇಟ್ಟಿದ್ದರು. ಬೆಂಕಿಯಿಂದ ಎಲ್ಲವೂ ಸುಟ್ಟು ಕರಕಲಾಯಿತು.

‘ಸಾಲ ತೀರಿಸಲು ಬೆಂಗಳೂರಿಗೆ ಗುಳೆ ಹೋಗಿದ್ದೆ. ಈಗ ಮತ್ತೆ ಕುಟುಂಬ ಸಂಕ ಷ್ಟಕ್ಕೆ ಸಿಲುಕಿದೆ. ಐವರು ಮಕ್ಕಳೊಂದಿಗೆ ಕುಟುಂಬ ನಿಭಾಯಿಸುವುದಾದರೂ ಹೇಗೆ’ ಎಂದು ಇಮಾಮ್ ಸಾಬ್ ರೋಧಿಸಿದರು.‘ಇಮಾಮ್‌ಸಾಬ್‌ ಒಪ್ಪತ್ತಿನ ಊಟಕ್ಕೂ ಪರದಾಡಬೇಕಿದೆ. ಸರ್ಕಾರ ತಕ್ಷಣ ಅವರಿಗೆ ಪರಿಹಾರ ನೀಡಬೇಕು’ ಎಂದು ರೈತ ಮುಖಂಡ ಮಹೇಶಗೌಡ ಸುಬೇದಾರ ಕೋರಿದ್ದಾರೆ.

ವಿದ್ಯುತ್ ತಂತಿ ಹರಿದು ಬಿದ್ದು ಬಾಲಕ ಸಾವು: ತಾಲ್ಲೂಕಿನ ಗೋಗಿ ಗ್ರಾಮದ ಬಳಿ ಚಲಿಸುತ್ತಿದ್ದ ಟಂಟಂ ವಾಹನದ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ.ಗೋಗಿ ಗ್ರಾಮದ ಗಣೇಶ ನಾಗಪ್ಪ ಯಾದವ (8) ಮೃತಪಟ್ಟವರು. ದುರ್ಗಮ್ಮ ಮತ್ತು ಶಾಂತಮ್ಮ ಗಾಯ ಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಹೊರವಲಯದಲ್ಲಿ ವಾಸವಿದ್ದ ಗ್ರಾಮಸ್ಥರು ಮದುವೆ ಸಮಾರಂಭದಲ್ಲಿ ಪಾಳ್ಗೊಳ್ಳಲು ಗೋಗಿ ಗ್ರಾಮದತ್ತ ಪ್ರಯಾ ಣಿಸುತ್ತಿದ್ದರು. ಆಗ ಅನಿರೀಕ್ಷಿತವಾಗಿ ವಿದ್ಯುತ್‌ ತಂತಿ ಹರಿದು ಬಿದ್ದ ಪರಿಣಾಮ ಘಟನೆ ಸಂಭವಿಸಿದೆ ಎಂದು ಗೋಗಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋರಾಟ ಎಚ್ಚರಿಕೆ:  ‘ವಿದ್ಯುತ್‌ ಪೂರೈಸುವ ಹಳೆಯ ತಂತಿ ಬದಲಿಸುವಂತೆ ಸಾಕಷ್ಟು ಬಾರಿ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ. ವಿದ್ಯುತ್ ತಂತಿಯನ್ನು ತಕ್ಷಣವೇ ಬದಲಾ ಯಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತೇವೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣಗೌಡ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.