ADVERTISEMENT

ಸಂಭ್ರಮದ ಜಯತೀರ್ಥರ ಪೂರ್ವಾರಾಧನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 7:05 IST
Last Updated 14 ಜುಲೈ 2017, 7:05 IST
ಯಾದಗಿರಿ ಸಮೀಪದ ಯರಗೋಳದಲ್ಲಿ ಗುರುವಾರ ಉತ್ತರಾದಿ ಮಠದಲ್ಲಿ ಸತ್ಯಾತ್ಮ ತೀರ್ಥ ಶ್ರೀಪಾದಂಗಳರು ಟೀಕಾರಾಯರು ಗ್ರಂಥ ರಚಿಸಿದ ಗುಹೆಗೆ ವಿಶೇಷ ಪೂಜೆ ಸಲ್ಲಿಸಲು ತೆರಳುತ್ತಿರುವುದು
ಯಾದಗಿರಿ ಸಮೀಪದ ಯರಗೋಳದಲ್ಲಿ ಗುರುವಾರ ಉತ್ತರಾದಿ ಮಠದಲ್ಲಿ ಸತ್ಯಾತ್ಮ ತೀರ್ಥ ಶ್ರೀಪಾದಂಗಳರು ಟೀಕಾರಾಯರು ಗ್ರಂಥ ರಚಿಸಿದ ಗುಹೆಗೆ ವಿಶೇಷ ಪೂಜೆ ಸಲ್ಲಿಸಲು ತೆರಳುತ್ತಿರುವುದು   

ಯಾದಗಿರಿ: ಟೀಕಾರಾಯರ ಗ್ರಂಥಗಳ ರಚನೆಯಾಗಿರುವ ತಾಲ್ಲೂಕಿನ ಯರ ಗೋಳ ಗ್ರಾಮದಲ್ಲಿ ಜಯತೀರ್ಥರ ಪೂರ್ವಾರಾಧನಾ ಮಹೋತ್ಸವ ಉತ್ತರಾದಿಮಠದ ಸತ್ಯಾತ್ಮ ತೀರ್ಥ ಶ್ರೀಪಾದಂಗಳ ಸಾನ್ನಿಧ್ಯದಲ್ಲಿ ಗುರುವಾರ ಅತ್ಯಂತ ಸಂಭ್ರಮದಿಂದ ಜರುಗಿತು.

ಅಕ್ಷೊಭ್ಯ ತೀರ್ಥರಿಂದ ದೀಕ್ಷೆ ಸ್ವೀಕರಿಸಿದ ಜಯತೀರ್ಥರು, ನಿಸರ್ಗದ ಮಡಿಲಲ್ಲಿ ಇರುವ ತಾಲ್ಲೂಕಿನ ಯರ ಗೋಳಕ್ಕೆ ಆಗಮಿಸಿ, 10 ವರ್ಷ ಯರಗೋಳದ ಗವಿಯಲ್ಲಿ ಗ್ರಂಥಗಳ ರಚನೆ ಮಾಡಿದರು. ಶ್ರೀಮನ್ಯಾಯ ಸುಧಾ, ತತ್ವಪ್ರಕಾಶಿಕಾ, ವಾದಾವಲಿ ಸೇರಿದಂತೆ ಸುಮಾರು 22 ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದರು.

ಅಲ್ಲಿಂದ ಮಳಖೇಡಕ್ಕೆ ತೆರಳಿ, ಗುರುಗಳಾದ ಅಕ್ಷೊಭ್ಯ ತೀರ್ಥರ ವೃಂದಾವನದ ಪಕ್ಕದಲ್ಲಿಯೇ ಜಯತೀರ್ಥರು, ವೃಂದಾ ವನ ಪ್ರವೇಶ ಮಾಡಿದರು. ಗುರುವಾರ ಜರುಗಿದ ಆರಾಧನಾ ಮಹೋತ್ಸವಕ್ಕೆ ರಾಜ್ಯ ಸೇರಿದಂತೆ ಆಂಧ್ರ, ಮಹಾರಾಷ್ಟ್ರ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡಲಾಯಿತು.

ADVERTISEMENT

ನಂತರ ಸತ್ಯಾತ್ಮ ತೀರ್ಥ ಶ್ರೀಪಾದಂಗ ಳವರು ದಿಗ್ವಿಜಯ ಮೂಲರಾಮ ದೇವರ ಪೂಜೆ ಮಾಡಿದರು. ಮಹಾ ಮಂಗಳಾರತಿ, ತೀರ್ಥ, ಪ್ರಸಾದ, ಮಂತ್ರಾಕ್ಷತೆಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸತ್ಯಾತ್ಮ ತೀರ್ಥ ಶ್ರೀಪಾದಂಗಳು, ಪ್ರಸಕ್ತ ದಿನಗಳಲ್ಲಿ ಒತ್ತಡದ ಬದುಕು, ಚಿಂತೆಗಳಿಂದಾಗಿ ಮಾನಸಿಕ ನೆಮ್ಮದಿ ಇಲ್ಲದಾಗಿದೆ. ಮಾನ ಸಿಕ ನೆಮ್ಮದಿ ಪಡೆಯಲು ಧ್ಯಾನ ಮಾಡ ಬೇಕು. ಮಾನವ ಜನ್ಮ ಸಾರ್ಥಕವಾಗಲು ಭಗವಂತನ ಸ್ಮರಣೆ ಮಾಡಬೇಕು ಎಂದು ಹೇಳಿದರು. ಭಕ್ತರು ಟೀಕಾರಾಯರು ಗ್ರಂಥ ರಚಿಸಿದ ಗುಹೆ, ಮೂಲರಾಮದೇವರು, ಸತ್ಯಾತ್ಮ ತೀರ್ಥರ ದರ್ಶನವನ್ನು ಪಡೆದರು. ಅಲ್ಲಿ ಸುಧಾ ಪಾಠ ನಡೆಯಿತು.

* * 

ಜಯತೀರ್ಥರು ಧ್ಯಾನ ಮಾಡಿ, ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದ ಯರಗೋಳ ಪುಣ್ಯ ಭೂಮಿಯಾಗಿದ್ದು, ಈ ಸ್ಥಳದ ಮಹಾತ್ಮೆ ಅಪಾರ.
ಸತ್ಯಾತ್ಮ ತೀರ್ಥ ಶ್ರೀಪಾದರು
ಉತ್ತರಾದಿಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.