ADVERTISEMENT

ಸಂಭ್ರಮದ ಮಂಡೇಲಮ್ಮ ದೇವಿಯ ಜಾತ್ರೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 7:06 IST
Last Updated 8 ಸೆಪ್ಟೆಂಬರ್ 2017, 7:06 IST
ಹುಣಸಗಿ ಸಮೀಪದ ಕೊಡೇಕಲ್ಲ ಗ್ರಾಮದ ಮಂಡೇಲಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ  ಪುರವಂತರ ಸೇವೆ ವೈಭವದಿಂದ ಜರುಗಿತು
ಹುಣಸಗಿ ಸಮೀಪದ ಕೊಡೇಕಲ್ಲ ಗ್ರಾಮದ ಮಂಡೇಲಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ  ಪುರವಂತರ ಸೇವೆ ವೈಭವದಿಂದ ಜರುಗಿತು   

ಹುಣಸಗಿ: ಸಮೀಪದ ಕೊಡೇಕಲ್ಲ ಗ್ರಾಮದಲ್ಲಿ ಮಂಡೇಲಮ್ಮ ದೇವಿಯ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಈಚೆಗೆ ನಡೆಯಿತು. ದೇವಿಯ ಭಾವಚಿತ್ರ ಮತ್ತು ಕಳಸದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಭಕ್ತರು ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಬಂದು ಭಕ್ತಿ ಸಮರ್ಪಿಸಿದರು.

ಬಳಿಕ ದೇವಿಯ ಉತ್ಸವ ಮೂರ್ತಿಯನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಗಂಗಾ ಸ್ನಾನಕ್ಕಾಗಿ ಗ್ರಾಮದ ಪವಿತ್ರ ಜಕಣಿ ಬಾವಿಗೆ ಕರೆ ತರಲಾಯಿತು. ಈ ಸಂದರ್ಭದಲ್ಲಿ ಜರುಗಿದ ಪುರವಂತರ ಸೇವೆ ಗಮನ ಸೆಳೆಯಿತು.ದೇವಿಗೆ ಗ್ರಾಮದ ಸರ್ವ ದೈವದ ಸೀರೆ ಉಡಿಸಿ ಉಡಿ ತುಂಬಿ ಪೂಜೆ ಸಲ್ಲಿಸಲಾಯಿತು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಗ್ರಾಮದ ರಂಗನಾಥ ದೊರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮೋಹನ ಪಾಟೀಲ, ಕನಕು ಜಿರಾಳ, ಹನುಮಂತ್ರಾಯ ಉಪ್ಪಲದಿನ್ನಿ, ಅವದೂತ್ ದೊರೆ, ಮದನು ಸಾಲವಾಡಗಿ, ಡಾ.ಬಿ.ಬಿ.ಬಿರಾದಾರ, ಪಾಯಣ್ಣ ಬಪ್ಪರಗಿ, ಬಸಣ್ಣ ತುಂಬಗಿ, ರಾಚಪ್ಪ ಉಪ್ಪಲದಿನ್ನಿ, ಸಿದ್ರಾಮ ತುಂಬಿಗಿ, ಗಿರೆಪ್ಪ ಮನ್ಯಾಳ, ಮನೋಹರ ಬಬಲೇಶ್ವರ, ಬಸಣ್ಣ ಧನ್ನೂರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.