ADVERTISEMENT

ಸಾವಯವ ಗೊಬ್ಬರ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 7:37 IST
Last Updated 8 ಫೆಬ್ರುವರಿ 2017, 7:37 IST

ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಸಾವಯವ ಭಾಗ್ಯ ಯೋಜನೆಯ 2016–17ನೇ ಅಡಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಪುಟಗಿ ರೈತರಿಗೆ ಉಚಿತ ಗೊಬ್ಬರ ವಿತರಣೆ ಮಾಡಿದರು.

ನಂತರ ಸಭೆಯಲ್ಲಿ ಮಾತನಾಡಿದ ಅವರು,‘ಪ್ರಸಕ್ತ ದಿನಗಳಲ್ಲಿ ರೈತರು ತಮ್ಮ ಜಮೀನಿನಲ್ಲಿ ಅಧಿಕ ಇಳುವರಿ ಆಸೆಗೆ ಬಿದ್ದು, ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಭೂಮಿಯ ಆರೋಗ್ಯ ಮತ್ತು ಅದನ್ನು ಬಳಸುತ್ತಿರುವ ಮಾನವ ಕುಲದ ಆರೋಗ್ಯ ಹಾಳಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಸಾವಯವ ಗೊಬ್ಬರವನ್ನು ತಯಾರಿಸಿ, ಬಳಕೆ ಮಾಡಿ ಆರೋಗ್ಯಕರ ವಾತಾವರಣ ಸೃಷ್ಟಿಸಬೇಕು’ ಎಂದರು.

ಕೃಷಿ ಅಧಿಕಾರಿಗಳು ಸಾವಯವ ಗೊಬ್ಬರ ಬಳಕೆಯ ಬಗ್ಗೆ ರೈತರಿಗೆ ಹಲವು ಶಿಬಿರಗಳನ್ನು ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಬೇಕು. ಜತೆಗೆ ಇಲಾಖೆಯ ಯೋಜನೆಗಳ ಲಾಭ ಪ್ರಾಮಾಣಿಕವಾಗಿ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ರೈತರಿಗೆ 50 ಕ್ವಿಂಟಲ್ ಸಾವಯವ ಗೊಬ್ಬರ ವಿತರಿಸಲಾಯಿತು. ಕೃಷಿ ಅಧಿಕಾರಿ ಶ್ರೀಮಂತ, ಮಲ್ಲಿನಾಥ ಪಟ್ಟೇ ದಾರ, ರವಿಕುಮಾರ ಬಡಿಗೇರ, ಪ್ರಗತಿಪರ ರೈತರಾದ ಅಮೃತರೆಡ್ಡಿ ಪಾಟೀಲ, ಭೀಮರೆಡ್ಡಿ ರಾಂಪೂರ ಹಳ್ಳಿ, ಶರಣಪ್ಪ ದ್ಯಾರಣೋರ, ಮಲ್ಲಪ್ಪ ಇದ್ಲಿ, ರಾಮರೆಡ್ಡಿ ಕೌಳೂರು, ಚಂದಪ್ಪ ತಮ್ಮ ಣೋರ, ಅರ್ಜುನ ಯಡ್ಡಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.