ADVERTISEMENT

‘ಸೋಲು ಗೆಲುವು ಸಮನಾಗಿ ಸ್ವೀಕರಿಸಿ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 9:50 IST
Last Updated 16 ಏಪ್ರಿಲ್ 2017, 9:50 IST

ಯಾದಗಿರಿ: ‘ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಅವುಗಳನ್ನು ಸಮಚಿತ್ತ ಮನಸ್ಸಿನಿಂದ ಸ್ವೀಕರಿಸಬೇಕು’ ಎಂದು ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ ಹತ್ತಿಕುಣಿ ಹೇಳಿದರು.ತಾಲ್ಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ  ಡಾ. ಬಿ.ಆರ್.ಅಂಬೇಡ್ಕರ್  ಜಯಂತ್ಯು ತ್ಸವ ಪ್ರಯುಕ್ತ ಶುಕ್ರವರ ಆಯೋಜಿ ಸಲಾಗಿದ್ದ ಟೆನ್ನಿಸ್‌ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೈಹಿಕ ಸದೃಢತೆ ಜತೆಗೆ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ. ಯುವಕರು ಕ್ರೀಡೆಯಿಂದ ದೂರ ಉಳಿ ಯಬಾರದು. ಕ್ರೀಡಾ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು’ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಶಿವ ಲಿಂಗಪ್ಪ ಪುಟಗಿ ಮಾತನಾಡಿ, ಆಧುನಿಕ ಯುಗದಲ್ಲಿ ಯುವಕರು ಮೊಬೈಲ್, ಟಿವಿಯತ್ತ ಹೆಚ್ಚು ಆಸಕ್ತಿ ತೋರುತ್ತಿ ರುವುದು ಸರಿಯಲ್ಲ. ದೇಶದ ಕ್ರೀಡಾ ಪಟುಗಳು ವಿಶ್ವದ ಗಮನ ಸೆಳೆದಿದ್ದಾರೆ. ಇಂಥ ಪಂದ್ಯಾವಳಿಯಲ್ಲಿ ಪ್ರತಿಭೆಗಳು ಬೆಳಕಿಗೆ ಬರುತ್ತವೆ ಎಂದರು.

ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಮಾರ್ತಾಂಡಪ್ಪ ನಾಟೇಕಾರ್ ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದರು. ಎಪಿ ಎಂಸಿ ಅಧ್ಯಕ್ಷ ಚಂದ್ರಾರೆಡ್ಡಿ ಬಂದಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಿ ಬಾಯಿ ಪರಶುರಾಮ ಚವ್ಹಾಣ, ಹಣ ಮಂತ ಬಡಗೇರಾ, ಹೊನ್ನಪ್ಪ ನಾಟೇ ಕಾರ್, ಚಂದ್ರಕಾಂತ ಕವಲ್ದಾರ, ಮುನಿಂದ್ರರೆಡ್ಡಿ, ಮಲ್ಲಣಗೌಡ ದಳಪತಿ, ದೇವಿಂದ್ರಪ್ಪ ಜೀನಬಾವಿ, ಭೀಮರಾಯ ಅಯ್ಯಾಳಪ್ಪನೋರ್,ವೈಜನಾಥರೆಡ್ಡಿ ಹತ್ತಿಕುಣಿ, ಶಿರೋ ಮಣಿ ಕಿಲ್ಲನಕೇರಾ, ರಾಜುಗೌಡ, ಲಿಂಗಾ ರೆಡ್ಡಿ, ಅರ್ಜುನ, ವೀರಭದ್ರಪ್ಪ ಯಡ್ಡಳ್ಳಿ, ಫಕೀರಪ್ಪ ನಾಟೇಕಾರ್, ಹಣ ಮಂತ ಬಂದಳ್ಳಿಕರ್ ಇದ್ದರು. ಕ್ರಿಕೆಟ್‌ ಟೂರ್ನಿ ಯಲ್ಲಿ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.