ADVERTISEMENT

‘ಹಿಂದೂ–ಮುಸ್ಲಿಂ ಏಕತೆಗೆ ಶ್ರಮಿಸಿದ್ದ ಟಿಪ್ಪು’

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 9:52 IST
Last Updated 11 ನವೆಂಬರ್ 2017, 9:52 IST
ಶಹಾಪುರದಲ್ಲಿ ತಾಲ್ಲೂಕು ಆಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಗುರು ಪಾಟೀಲ ಶಿರವಾಳ ಮಾತನಾಡಿದರು
ಶಹಾಪುರದಲ್ಲಿ ತಾಲ್ಲೂಕು ಆಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಗುರು ಪಾಟೀಲ ಶಿರವಾಳ ಮಾತನಾಡಿದರು   

ಶಹಾಪುರ: ‘ಸಗರನಾಡು ಭಾವೈಕ್ಯತೆ ತಾಣವಾಗಿದೆ. ಅಲ್ಪಸಂಖ್ಯಾತರ ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ನಾವೆಲ್ಲರೂ ಕೈಜೋಡಿಸಬೇಕು’ ಎಂದು ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು. ಇಲ್ಲಿನ ನಗರಸಭೆ ಆವರಣದಲ್ಲಿ ತಾಲ್ಲೂಕು ಆಡಳಿತ ಶುಕ್ರವಾರ ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕಾಗಿ ಯೇ ಪ್ರತ್ಯೇಕವಾಗಿ ಮೊರಾರ್ಜಿ ವಸತಿ ಶಾಲೆಯನ್ನು ಸ್ಥಾಪಿಸಲಾಗಿದೆ’ ಎಂದರು. ಉಪನ್ಯಾಸ ಡಾ.ರವೀಂದ್ರನಾಥ ಹೊಸ್ಮನಿ ಮಾತನಾಡಿ, ‘ಟಿಪ್ಪು ಅಪ್ರತಿಮ ಹೋರಾಟಗಾರ. ಹಿಂದೂ–ಮುಸ್ಲಿಂರ ಏಕತೆಗಾಗಿ ಶ್ರಮಿಸಿದ್ದಾರೆ. ರೈತರ ಕಲ್ಯಾಣಕ್ಕೆ ಕೆರೆ ನಿರ್ಮಾಣ ಮಾಡಿದ್ದರು. ದೇಶಭಕ್ತನಿಗೆ ಮತಾಂಧ ಎಂಬ ಹಣೆಪಟ್ಟಿ ಕಟ್ಟುವುದು ಬೇಡ’ ಎಂದು ಹೇಳಿದರು.

ತಹಶೀಲ್ದಾರ್‌ ಸೋಮಶೇಖರ ಹಾಗರಗುಂಡಗಿ, ಟಿಪ್ಪು ಸುಲ್ತಾನ್ ತಾಲ್ಲೂಕು ಘಟಕದ ಅಧ್ಯಕ್ಷ ಸಯ್ಯದ ಸೈಫುದ್ದೀನ ಖಾದ್ರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಲೀಂ ಸಂಗ್ರಾಮ, ಲಾಲ ಅಹ್ಮದ ಖುರೇಶಿ, ನೂರುದ್ದೀನ ಖಾದ್ರಿ, ಸಯ್ಯದ ಇಬ್ರಾಹಿಂಸಾಬ್ ಜಮದಾರ, ಕಾಸೀಂಸಾಬ್ ಕಾಲೇಬುಡ್ಡೆ, ಅಬೀದ, ಖಾಲಿದ ಹುಸೇನಿ, ಇರ್ಫಾನ ಸಯ್ಯದ, ಖಲಿಲ ಅಹ್ಮದ, ಸಣ್ಣ ನಿಂಗಪ್ಪ ನಾಯ್ಕೋಡಿ, ವಸಂತ ಸುರಪುರಕರ್, ಶಿವಕುಮಾರ ತಳವಾರ ಇದ್ದರು.

ADVERTISEMENT

ನಾಯ್ಕಲ್: ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಜಾ ಮೈನೋದ್ದೀನ ಜಮಶೇರಿ ಟಿಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಗ್ರಾಮದ ಗಣ್ಯರಾದ ಉಮಾರಡ್ಡಿ ಪಾಟೀಲ, ಇಸ್ಮಾಯಿಲ್ ಸಾಬ್ ಕುರುಕುಂದಿ, ಸಲಿಂ ಗೊಡೆಕಾರ, ಮರೆಪ್ಪ ಕಣಜಿಕರ್, ಅಬ್ದುಲ ರಜಾಕ, ಭಾಷುಮೀಯಾ ಇದ್ದರು.
ದೋರನಹಳ್ಳಿ: ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಟಿಪ್ಪು ಜಯಂತಿ ಆಚರಿಸಲಾಯಿತು. ವಕ್ಫ್‌ ಮಂಡಳಿ ನಿರ್ದೇಶಕ ಮಹಿಬೂಬು ಅಲಿ ಜಮದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹ್ಮದ ಆರಿಫ್ ಮಠ, ಅಬ್ದುಲ ಕರೀಮಠ, ನಾಗಯ್ಯ ಗುತ್ತೆದಾರ, ನಿಜಗುಣ ಪೂಜಾರಿ, ಅಬ್ದುಲ ಭಾಷಾ ಗೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.