ADVERTISEMENT

‘ಸಾಮಾಜಿಕ ಜಾಲತಾಣ ಬಳಕೆ: ಎಚ್ಚರ ವಹಿಸಿ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 7:17 IST
Last Updated 28 ಜನವರಿ 2018, 7:17 IST

ಸುರಪುರ: ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿದೆ ಎಂದು ಮಾಜಿ ಸಚಿವ ರಾಜೂಗೌಡ ಹೇಳಿದರು. ರಂಗಂಪೇಟೆ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣಗಳ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದ ಸಂಗತಿಯನ್ನು ಕ್ಷಣಾರ್ಧದಲ್ಲಿ ನಾವು ಗಮನಿಸಬಹುದು. ಮತ್ತು ಅಲ್ಲಿಯ ಫೋಟೊ ಹಾಗು ವಿಡಿಯೊಗಳನ್ನು ಹಂಚಿಕೊಳ್ಳಬಹುದು.

ರಾಜಕೀಯ ಪಕ್ಷಗಳು ಕೂಡ ಸಾಮಾಜಿಕ ಜಾಲತಾಣಗಳನ್ನು ಪ್ರಚಾರಕ್ಕೆ ಬಳಕೆ ಮಾಡುತ್ತಿವೆ. ಕಾರ್ಯಕರ್ತರು ಇವುಗಳನ್ನು ಬಳಸುವಾಗ ಅನಗತ್ಯವಾದ ಸಂದೇಶಗಳನ್ನು, ಪ್ರಚೊದನಕಾರಿವಿಷಯವನ್ನು ಪೋಸ್ಟ್‌ ಮಾಡದೆ ಜನಹಿತವಾಗುವಂತಹ ಮತ್ತು ಪಕ್ಷದ ಸಾಧನೆಯನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ADVERTISEMENT

ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಸುರೇಶ ಸಜ್ಜನ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅಮರಣ್ಣ ಹುಡೇದ, ಪ್ರಮುಖರಾದ ದೊಡ್ಡ ದೇಸಾಯಿ, ಶ್ರೀನಿವಾಸ ನಾಯಕ ದರಬಾರಿ, ಎಸ್.ಎನ್.ಪಾಟೀಲ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.