ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 30 ಜುಲೈ 2017, 19:30 IST
Last Updated 30 ಜುಲೈ 2017, 19:30 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

1) ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ‘ಗ್ರೀನ್ ಇಂಡಿಯಾ ಮಿಷನ್’ ಯೋಜನೆಯನ್ನು ಯಾವ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ?
a) ಕಲಬುರ್ಗಿ →b) ಉತ್ತರ ಕನ್ನಡ
c) ಹಾಸನ →→d) ಎಲ್ಲವೂ

2) ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯು ಈ ಕೆಳಕಂಡ ಯಾವ ನಗರದಲ್ಲಿ ಸ್ಥಾಪನೆ ಮಾಡಲಾಗಿದೆ?
a) ಮಡಿಕೇರಿ →b) ದಾಂಡೇಲಿ
c) ಚಿಕ್ಕಮಗಳೂರು →d) ಹುಬ್ಬಳ್ಳಿ

3) ರಾಷ್ಟ್ರಕವಿ ಗೋವಿಂದ ಪೈ ಅವರ ಸ್ಮರಣಾರ್ಥ ’ಗಿಳಿವಿಂಡು’ ಎಂಬ ಸಾಂಸ್ಕೃತಿಕ ಕೇಂದ್ರ ಯಾವ ಸ್ಥಳದಲ್ಲಿದೆ?
a) ಮಂಜೇಶ್ವರ →b) ಕಾಸರಗೋಡು
c) ಉಡುಪಿ →→d) ಮಂಗಳೂರು

ADVERTISEMENT

4) ರಾಜ್ಯ ಸರ್ಕಾರ ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್ ಅನ್ನು ಯಾವ ಪಟ್ಟಣದಲ್ಲಿ ಅಭಿವೃದ್ಧಿಪಡಿಸುತ್ತಿದೆ?
a) ಹಿರಿಯೂರು →b) ರಾಣೆಬೆನ್ನೂರು
c) ಬನವಾಸಿ →d) ಚಿಂತಾಮಣಿ

5) ಲಂಡನ್ ಮಹಾನಗರ ಥೇಮ್ಸ್ ನದಿಯ ತಟದಲ್ಲಿದೆ; ಪ್ಯಾರಿಸ್ ಮಹಾನಗರ ಯಾವ ನದಿಯ ದಂಡೆಯ ಮೇಲಿದೆ ?
a) ಡಾಶುಸ್ ನದಿ →b) ರೈನ್ ನದಿ
c) ಸೀನ್ ನದಿ →d) ಏವಾನ್ ನದಿ

6) ರಾಮಕೃಷ್ಣ ಪರಮಹಂಸರ ಬಾಲ್ಯದ ಹೆಸರನ್ನು ಈ ಕೆಳಕಂಡ ಹೆಸರುಗಳಲ್ಲಿ ಗುರುತಿಸಿ?
a) ಗದಾಧರ ಚಟ್ಟೋಪಾಧ್ಯಾಯ
b) ಗಂಗಾಧರ ಚಟ್ಟೋಪಾಧ್ಯಾಯ
c) ರಾಮಕೃಷ್ಣ ಚಟ್ಟೋಪಾಧ್ಯಾಯ
d) ದತ್ತಾತ್ರೇಯ ಚಟ್ಟೋಪಾಧ್ಯಾಯ

7) ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಂದಗಾಮಿಗಳೆಂದು ಗುರುತಿಸಿಕೊಂಡಿದ್ದ ಹೋರಾಟಗಾರರನ್ನು ಗುರುತಿಸಿ?
a) ದಾದಾಬಾಯಿ ನವರೋಜಿ
b) ಗೋಪಾಲಕೃಷ್ಣ ಗೋಖಲೆ
c) ಆನಂದಮೋಹನ ಬೋಸ್
d) ಮೇಲಿನ ಎಲ್ಲರೂ

8) ‘ಅಮರ್ ಸೋನಾರ್ ಬಾಂಗ್ಲಾ’ ಎಂಬ ಗೀತೆ ಬಾಂಗ್ಲಾದೇಶದ ರಾಷ್ಟ್ರಗೀತೆಯಾಗಿದೆ. ಇದನ್ನು ಬರೆದವರು ಯಾರು?
a) ರವೀಂದ್ರನಾಥ್ ಟ್ಯಾಗೋರ್
b) ನವಾಬ್ ಸಲೀಂವುಲ್ಲಾ
c) ಸಯ್ಯದ್ ಅಹಮ್ಮದ್ ಖಾನ್
d) ಮಿರ್ಜಾ ಗುಲಾಂ ಅಹಮ್ಮದ್

9) ಆಸ್ಟ್ರೇಲಿಯಾದ (ಕ್ಯಾನ್‌ಬೆರಾ) ಕಾಲಮಾನವು ಭಾರತದ ಕಾಲಮಾನಕ್ಕಿಂತ ಎಷ್ಟು ಗಂಟೆಗಳ ಕಾಲ ಮುಂದಿದೆ?
a) 2 ಗಂಟೆ 30 ನಿಮಿಷ →b) 3 ಗಂಟೆ
c) 4 ಗಂಟೆ 30 ನಿಮಿಷ →d) 5 ಗಂಟೆ

10) ಆವರ್ತ ಮಳೆಯು ಅಧಿಕವಾಗಿ ಈ ಕೆಳಕಂಡ ಯಾವ ದೇಶದಲ್ಲಿ ಸುರಿಯುತ್ತದೆ?
a) ಜಪಾನ್ →b) ಭಾರತ
c) ಮೆಕ್ಸಿಕೊ →d) ಅಮೆರಿಕ

ಉತ್ತರಗಳು 1-d, 2-d, 3- a, 4-b, 5-c, 6-a, 7-d, 8-a, 9-c, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.