ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಪ್ರಜಾವಾಣಿ ಕ್ವಿಜ್‌
ಪ್ರಜಾವಾಣಿ ಕ್ವಿಜ್‌   

1. ‘ಶೃಂಗಾರಕವಿ’ ಎಂದು ರತ್ನಾಕರವರ್ಣಿಯನ್ನು ಕರೆದರೆ, ‘ನಾದಲೋಲ’ ಮತ್ತು ‘ಉಪಮಾಲೋಲ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?

a) ಲಕ್ಮೀಶ

b) ಕುಮಾರವ್ಯಾಸ

ADVERTISEMENT

c) ಪೊನ್ನ

d) ಪುರಂದರದಾಸ

2. ಭಾರತದಲ್ಲಿರುವ ಹಲವು ಕಾರ್ಮಿಕ ಸಂಘಟನೆಗಳ ಪೈಕಿ ಮೊದಲು ಸ್ಥಾಪನೆಗೊಂಡ ಕಾರ್ಮಿಕ ಸಂಘಟನೆಯನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?

a) ಎಚ್ಎಂಎಸ್‌

b) ಎಐಟಿಯುಸಿ

c) ಸಿಐಟಿಯು

d) ಐಎನ್‌ಟಿಯುಸಿ

3. ಉಸ್ತಾದ್ ಆಲಿ ಅಹಮ್ಮದ್ ಹುಸೇನ್ ಅವರು ಯಾವ ವಾದ್ಯವನ್ನು ನುಡಿಸುವುದರಲ್ಲಿ ಖ್ಯಾತರಾಗಿದ್ದರು?

a) ತಬಲ

b) ಘಟ

c) ಶಹನಾಯ್

d) ಹಾರ್ಮೋನಿಯಂ

4. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ‘ಚರ್ಮ ಬ್ಯಾಂಕ್‍’ ಅನ್ನು ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲಾಗಿದೆ?

a) ಮೆಗ್ಗಾನ್ ಆಸ್ಪತ್ರೆ-ಶಿವಮೊಗ್ಗ

b) ಕಿಮ್ಸ್ ಆಸ್ಪತ್ರೆ-ಹುಬ್ಬಳ್ಳಿ

c) ನಿಮಾನ್ಸ್- ಬೆಂಗಳೂರು

d) ವಿಕ್ಟೋರಿಯಾ ಆಸ್ಪತ್ರೆ-ಬೆಂಗಳೂರು

5. ದೇಶದಲ್ಲೇ ಪ್ರಸಿದ್ಧಿಯಾಗಿರುವ ‘ಬ್ಯಾಡಗಿ’ ಮಾರುಕಟ್ಟೆ ಯಾವ ಬೆಳೆಯ ವಹಿವಾಟಿಗೆ ಹೆಸರುವಾಸಿಯಾಗಿದೆ. ಹಾಗೇ ಇದು ಯಾವ ರಾಜ್ಯದಲ್ಲಿದೆ?

a) ಬೆಲ್ಲ-ಆಂಧ್ರಪ್ರದೇಶ

b) ಮಾವಿನ ಹಣ್ಣು-ತಮಿಳುನಾಡು

c) ನೆಲಗಡಲೆ-ತೆಲಂಗಾಣ

d) ಮೆಣಸಿನಕಾಯಿ-ಕರ್ನಾಟಕ

6. ಬ್ರಿಟನ್ ದೇಶದ ವೈದ್ಯವಿಜ್ಞಾನಿ ಜೆಮ್ಸ್ ಪಾರ್ಕಿನ್‌ಸನ್‌ ಅವರು ಈ ಕೆಳಕಂಡ ಯಾವ ಕಾಯಿಲೆಯನ್ನು ಕಂಡುಹಿಡಿದರು?

a) ಸೋರಿಯಾಸಿಸ್

b) ಆಟಿಸಂ

c) ಪಾರ್ಕಿನ್‌ಸನ್‌

d) ದಡರಾ

7. ಸ್ವತಂತ್ರ ಭಾರತದ ಮೊಟ್ಟಮೊದಲ ರಾಷ್ಟ್ರೀಯ ಸುದ್ದಿ ಸಂಸ್ಥೆ ಯಾವುದು?

a) ಆಲ್ ಇಂಡಿಯಾ ನ್ಯೂಸ್ ಏಜೆನ್ಸಿ

b) ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ

c) ದಿ ಅಸೋಶಿಯೇಟೆಡ್ ಪ್ರೆಸ್ ಇಂಡಿಯಾ

d) ಆಲ್ ನ್ಯೂಸ್ ಇಂಡಿಯಾ

8. ಜಾಗತಿಕವಾಗಿ ಅತಿ ಹೆಚ್ಚು ಅಲ್ಯೂಮಿನಿಯಂ ಲೋಹವನ್ನು ಉತ್ಪಾದನೆ ಮಾಡುವ ದೇಶ ಯಾವುದು?

a) ಚೀನಾ

b) ಭಾರತ

c) ಅಮೆರಿಕ

d) ಜರ್ಮನಿ

9.ದೊಡ್ಡಹುಲ್ಲೋಜಿ ರುಕ್ಕೋಜಿರಾವ್ ಅವರು ಬರೆದ ಯಾರ ಕುರಿತಾದ ಸಮಗ್ರ ಜೀವನಚರಿತ್ರೆ ಪುಸ್ತಕಕ್ಕೆ ‘ಸ್ವರ್ಣಕಮಲ’ ಪ್ರಶಸ್ತಿ ಬಂದಿದೆ?

a) ಡಾ. ರಾ‌ಜ್‌ಕುಮಾರ್

b) ಡಾ. ವಿಷ್ಣುವರ್ದನ್

c) ಸರೋಜಾ ದೇವಿ

d) ಕಲ್ಪನಾ

10. ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧಧರ್ಮವನ್ನು ಯಾವ ವರ್ಷ ಸ್ವೀಕಾರ ಮಾಡಿದರು?

a) 1956 ಆಕ್ಟೋಬರ್

b) 1956 ನವೆಂಬರ್

c) 1956 ಡಿಸೆಂಬರ್

d) 1957 ಜನವರಿ

ಉತ್ತರಗಳು: 1-a, 2-b, 3- c, 4-d, 5-d, 6-c, 7-b, 8-a, 9-a, 10-a.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.