ADVERTISEMENT

ಕರಣ್ ಆತಂಕ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST
ಕರಣ್ ಆತಂಕ
ಕರಣ್ ಆತಂಕ   

ಬಾಲಿವುಡ್‌ ಗಲ್ಲಿಯಲ್ಲಿ ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿರುವ ಚಿತ್ರ ನಿರ್ದೇಶಕ ಕರಣ್ ಜೋಹರ್‌ ಆತಂಕದಲ್ಲಿದ್ದಾರೆ!

ನಿರ್ದೇಶಕರಾಗಿ ನಟ–ನಟಿಯರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದ ಕರಣ್, ಮೇ 15ರಂದು ತೆರೆಕಾಣಲಿರುವ ‘ಬಾಂಬೆ ವೆಲ್ವೆಟ್‌’ ಚಿತ್ರದಲ್ಲಿ ಪಾತ್ರವಾಗಿದ್ದೇ ಈ ಆತಂಕಕ್ಕೆ ಕಾರಣವಾಗಿದೆ. ಅನುರಾಗ್‌ ಕಶ್ಯಪ್‌ ಅವರ ಈ ಚಿತ್ರದಲ್ಲಿ ಕರಣ್‌ ಜೋಹರ್‌ ಅವರು ಖೈಜದ್‌ ಖಂಬತ್‌ (Kaizad Khambatta) ಎಂಬ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೇ’ ಸಿನಿಮಾದ ಪುಟ್ಟ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದ ಕರಣ್, ‘ಈ ಸಿನಿಮಾದಲ್ಲಿನ ನನ್ನ ಪಾತ್ರದ ಕುರಿತು ನಿಜವಾಗಿಯೂ ಆತಂಕಕ್ಕೆ ಒಳಗಾಗಿದ್ದೇನೆ. ಮುಖ್ಯ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ಬಿಡುಗಡೆಯ ನಂತರ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಎಂಬುದು ನನ್ನ ಆತಂಕ ಹೆಚ್ಚಿಸಿದೆ’ ಎಂದಿದ್ದಾರೆ.

‘ಹೆಚ್ಚಾಗಿ ಕಪ್ಪು ದಿರಿಸುಗಳೇ ನನ್ನನ್ನು ಅಲಂಕರಿಸುತ್ತಿದ್ದವು. ಆದರೆ ಈ ಸಿನಿಮಾದಲ್ಲಿ ವೈವಿಧ್ಯಮಯ ಬಣ್ಣದ ದಿರಿಸುಗಳನ್ನು ಧರಿಸುವಂತೆ ಮಾಡಿದ್ದಾರೆ ಅನುರಾಗ್‌. ಚಿತ್ರ ಹೀಗೆ ಇರಬೇಕು ಎಂಬ ಸ್ಪಷ್ಟ ಚಿತ್ರಣ ಅನುರಾಗ್‌ ಅವರಿಗಿದ್ದಿದ್ದರಿಂದ ಅವರು ಹೇಳಿದಂತೆ ಕೇಳಿದ್ದೇನೆ. ಯಾವುದೇ ಸಂದರ್ಭದಲ್ಲಿ ಕೋಪಿಸಿಕೊಳ್ಳುವ ಅವಶ್ಯಕತೆ ಉದ್ಭವಿಸಲೇ ಇಲ್ಲ. ನಟನಾಗಿ ನಿರ್ದೇಶಕನ ಮಾತುಗಳನ್ನು ಪಾಲಿಸುವುದು ನನ್ನ ಕರ್ತವ್ಯವಾಗಿತ್ತು. ಸಿನಿಮಾ ನಿರ್ದೇಶನದ ಸಂದರ್ಭದಲ್ಲಿ ನಾನೂ ನಟರಿಂದ ಇದೇ ನಡವಳಿಕೆಯನ್ನು ಅಪೇಕ್ಷಿಸುತ್ತೇನೆ’ ಎಂದು ವಿಧೇಯವಾಗಿ ನುಡಿದಿದ್ದಾರೆ ಕರಣ್.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.