ADVERTISEMENT

‘ಕೆಂಪೇಗೌಡ 2’ ಚಿತ್ರೀಕರಣದ ವೇಳೆ ಅವಘಡ: ಕೋಮಲ್‌, ಯೋಗಿ ಅಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 11:30 IST
Last Updated 30 ಆಗಸ್ಟ್ 2017, 11:30 IST
‘ಕೆಂಪೇಗೌಡ 2’ ಚಿತ್ರೀಕರಣದ ವೇಳೆ ಅವಘಡ: ಕೋಮಲ್‌, ಯೋಗಿ ಅಪಾಯದಿಂದ ಪಾರು
‘ಕೆಂಪೇಗೌಡ 2’ ಚಿತ್ರೀಕರಣದ ವೇಳೆ ಅವಘಡ: ಕೋಮಲ್‌, ಯೋಗಿ ಅಪಾಯದಿಂದ ಪಾರು   

ಚೆನ್ನೈ: ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯುತ್ತಿದ್ದ ‘ಕೆಂಪೇಗೌಡ 2’ ಸಿನಿಮಾ ಚಿತ್ರೀಕರಣದ ವೇಳೆ ಅವಘಡ ನಡೆದಿದೆ. ನಟರಾದ ಕೋಮಲ್‌ ಮತ್ತು ಯೋಗಿ ಅವರಿದ್ದ ವಾಹನ ಚಿತ್ರೀಕರಣದ ಸಂದರ್ಭದಲ್ಲಿ ಪಲ್ಟಿಯಾಗಿದೆ. ನಟರಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.

ಚೇಸಿಂಗ್ ದೃಶ್ಯದ ಚಿತ್ರೀಕರಣದ ವೇಳೆ ನಿಯಂತ್ರಣ ತಪ್ಪಿ ಇಬ್ಬರೂ ವಾಹನದಿಂದ ಕೆಳಗೆ ಬಿದ್ದಿದ್ದಾರೆ. ಇಬ್ಬರನ್ನೂ ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಘಟನೆಯಲ್ಲಿ ಕೋಮಲ್ ಮತ್ತು ಯೋಗಿಗೆ ಗಂಭೀರ ಗಾಯಗಳಾಗಿಲ್ಲ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT