ADVERTISEMENT

ಜೆನ್ನಿಫರ್‌–ಜಸ್ಟಿನ್‌ ಮದುವೆ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ನಟಿ ಜೆನ್ನಿಫರ್ ಅನಿಸ್ಟನ್ ಅವರು ಜಸ್ಟಿನ್ ಥೆರೌಕ್ಷ್ ಅವರನ್ನು ಸದ್ಯದಲ್ಲೇ ಹವಾಯ್‌ನಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಳೆದ ಕೆಲ ವರ್ಷದಿಂದ ಪ್ರೀತಿಸುತ್ತಿದ್ದ ಈ ಜೋಡಿ ಈಗ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

45 ವರ್ಷದ ನಟಿ ಜೆನ್ನಿಫರ್‌ ಮತ್ತು ಆಕೆಯ ಗೆಳೆಯ ಜಸ್ಟಿನ್‌ ತಮ್ಮ ದೀರ್ಘಕಾಲದ ಪ್ರೇಮಕ್ಕೆ ಮದುವೆಯ ರುಜು ಹಾಕುವ ನಿರ್ಧಾರಕ್ಕೆ ಬಂದಿದ್ದಾರಂತೆ. ಅದರಂತೆ ಜಸ್ಟಿನ್‌ ಅವರು ಜೆನ್ನಿಫರ್‌ಗೆ ಮೆಕ್ಸಿಕೋದಲ್ಲಿ ಮದುವೆಯಾಗುವ ಬಗ್ಗೆ ತಿಳಿಸಿದ್ದರು. ಹೊಂಬಣ್ಣದ ಚೆಲುವೆ ಜೆನ್ನಿಫರ್‌ ಅದಕ್ಕೆ ಓಕೆ ಎಂದಿದ್ದರು. ಆದರೆ, ಜೆನ್ನಿಫರ್‌ ಈಗ ತಮ್ಮ ಮನಸ್ಸು ಬದಲಾಯಿಸಿ, ಹವಾಯ್‌ನಲ್ಲಿ ಮದುವೆಯಾಗುವ ಎಂದು ತನ್ನ ಹುಡುಗನಿಗೆ ಹೇಳಿದ್ದಾರಂತೆ.

ಅಂದಹಾಗೆ, ಈ ಜೋಡಿಹಕ್ಕಿಗಳು ಹವಾಯ್‌ನಲ್ಲಿ ಕೇವಲ 20 ಮಂದಿ ಆಪ್ತರ ಸಮ್ಮುಖದಲ್ಲಿ ಮದುವೆಯಾಗುವ ನಿರ್ಧಾರ ಮಾಡಿದ್ದಾರಂತೆ. ಜೆನ್ನಿಫರ್‌ ಫೆಬ್ರುವರಿ ತಿಂಗಳಲ್ಲಿ ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರ ಹುಟ್ಟುಹಬ್ಬಕ್ಕೆ ಗೆಳೆಯ ಜಸ್ಟಿನ್‌ ಬಂದಿರಲಿಲ್ಲ. ಆಗ ಪಾರ್ಟಿಗೆ ಬಂದಿದ್ದವರೆಲ್ಲಾ ಜೆನ್ನಿಫರ್‌ ಮತ್ತು ಜಸ್ಟಿನ್‌ ನಡುವಿನ ಪ್ರೀತಿ ಮುರಿದುಬಿದ್ದಿರಬಹುದುಎಂದು ಮಾತನಾಡಿಕೊಂಡಿದ್ದರು. ಈಗ ಇವರಿಬ್ಬರೂ ಮದುವೆಯಾಗುವ ನಿರ್ಧಾರ ಪ್ರಕಟಿಸುವ ಮೂಲಕ ತಮ್ಮ ಪ್ರೀತಿ ಇನ್ನೂ ಜೀವಂತವಾಗಿದೆ ಎಂದು ಘೋಷಿಸಿದ್ದಾರೆ. ಅಂತೂ ಇಂತೂ ಈ ಜೋಡಿ ಸದ್ಯದಲ್ಲೇ ಮದುವೆಯಾಗಿ ಹನಿಮೂನ್‌ಗೆ ಹೊರಡುವ ತಯಾರಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.