ADVERTISEMENT

ಡಬ್ಬಿಂಗ್ ವಿರೋಧದ ನಡುವೆಯೇ ‘ಸತ್ಯದೇವ್‌ IPS’ ತೆರೆಗೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 8:47 IST
Last Updated 2 ಮಾರ್ಚ್ 2017, 8:47 IST
ಡಬ್ಬಿಂಗ್ ವಿರೋಧದ ನಡುವೆಯೇ ‘ಸತ್ಯದೇವ್‌ IPS’ ತೆರೆಗೆ
ಡಬ್ಬಿಂಗ್ ವಿರೋಧದ ನಡುವೆಯೇ ‘ಸತ್ಯದೇವ್‌ IPS’ ತೆರೆಗೆ   

ಬೆಂಗಳೂರು: ಕನ್ನಡಕ್ಕೆ ಡಬ್ಬಿಂಗ್‌ ಚಿತ್ರಗಳ ಅವಶ್ಯಕತೆ ಇದೆಯೇ? ಡಬ್ಬಿಂಗ್‌ ಬೇಕು–ಬೇಡದ ಚರ್ಚೆ ಮತ್ತೆ ಕಾವೇರುತ್ತಿದೆ. ಈ ನಡುವೆ ತಮಿಳು ನಟ ಅಜಿತ್‌ ಅಭಿನಯದ ‘ಸತ್ಯದೇವ್‌ IPS’ ಡಬ್ಬಿಂಗ್‌ ಮುಗಿಸಿ ಶುಕ್ರವಾರ ತೆರೆಕಾಣುತ್ತಿದೆ.

ಗೌತಮ್‌ ವಾಸುದೇವ್‌ಮೆನನ್‌ ನಿರ್ದೇಶಿಸಿರುವ ಸಿನಿಮಾ ಕನ್ನಡಕ್ಕೆ ಡಬ್‌ ಆಗಿದ್ದು, ರಾಜ್ಯಾದ್ಯಂತ ಶುಕ್ರವಾರ ತೆರೆಕಾಣಲು ಸಜ್ಜಾಗಿದೆ. ಚಿತ್ರ ಬಿಡುಗಡೆಯ ಕುರಿತು ಜಾಹೀರಾತು ಕೂಡ ಪ್ರಕಟಿಸಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಜಗ್ಗೇಶ್‌, ಕನ್ನಡಪರ ಹೋರಾಟಗಾರರಾದ ವಾಟಾಳ್‌ ನಾಗರಾಜ್‌ ಸೇರಿದಂತೆ ಹಲವರು ಡಬ್ಬಿಂಗ್‌ ಚಿತ್ರಗಳನ್ನು ವಿರೋಧಿಸಿ ದನಿಯೆತ್ತಿದ್ದಾರೆ.

2015ರಲ್ಲಿ ಉತ್ತಮ ಗಳಿಕೆ ಕಂಡಿದ್ದ ತಮಿಳಿನ ‘ಯೆನ್ನೈ ಅರಿಂಧಾಳ್’ ಚಿತ್ರ ಈಗ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಅಜಿತ್, ಅನುಷ್ಕಾ ಶೆಟ್ಟಿ ಹಾಗೂ ತ್ರಿಶಾ ಕ್ರಿಷ್ನನ್‌ ಪ್ರಮುಖ ಪಾತ್ರದಲ್ಲಿದ್ದಾರೆ.

ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿರುವ ಚಿತ್ರದ ಟ್ರೇಲರ್‌ ಈಗಾಗಲೇ 2ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಮಕ್ಕಳ ಅರಿವಿನ ಕಾರ್ಯಕ್ರಮಗಳಲ್ಲಿ ಡಬ್ಬಿಂಗ್‌...
ಪ್ರಾಣಿ, ಪರಿಸರ, ಇತಿಹಾಸ ಹಾಗೂ ವಿಜ್ಞಾನ ಅನೇಕ ವಿಷಯಗಳನ್ನು ನ್ಯಾಷನಲ್‌ ಜಿಯೋಗ್ರಫಿಕ್‌, ಡಿಸ್ಕವರಿ, ಹಿಸ್ಟರಿ ಚಾಲನ್‌ಗಳು ಪ್ರಸ್ತುತ ಪಡಿಸುತ್ತಿವೆ. ಇಂಥ ಕಾರ್ಯಕ್ರಮಗಳನ್ನು ನಮ್ಮ ಮಕ್ಕಳಿಗೆ ನಮ್ಮದೇ ಭಾಷೆಯಲ್ಲಿ  ತಲುಪಿಸಬೇಕಾಗುತ್ತದೆ. ಜ್ಞಾನದ ಹರಿವಿಗೆ ಮುಖ್ಯವೆನಿಸುತ್ತದೆ. ಆದರೆ, ಇಂಥ ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ನಿರ್ಮಾಣ ಮಾಡಲು ಬಜೆಟ್‌ ಸಮಸ್ಯೆ ಎದುರಾಗುತ್ತದೆ. ಇಲ್ಲಿ ಡಬ್ಬಿಂಗ್‌ ಅನಿವಾರ್ಯವಾಗುತ್ತದೆ.

ADVERTISEMENT

ಇನ್ನೂ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕಾರ್ಟೂನ್‌ ಚಿತ್ರಗಳೆಲ್ಲವೂ ಡಬ್ಬಿಂಗ್‌ ಆದವೇ!
ಮನರಂಜನೆಯ ಸಿನಿಮಾಗಳಲ್ಲಿ ಡಬ್ಬಿಂಗ್‌ ಮಾಡುವ ಕುರಿತು...ನೋ ಕಮೆಂಟ್ಸ್‌....
–ಗಿರಿರಾಜ್‌ ಬಿ.ಎಂ., ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.