ADVERTISEMENT

ಪಸಿನೊ ಅಭಿಮಾನಿ ಟೈಗರ್‌

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 19:30 IST
Last Updated 6 ಜುಲೈ 2015, 19:30 IST

ಕಟ್ಟುಮಸ್ತಾದ ಮೈಕಟ್ಟಿನಿಂದಲೇ ಬಾಲಿವುಡ್‌ ಗಲ್ಲಿಯಲ್ಲಿ ಗಮನ ಸೆಳೆಯುತ್ತಿರುವ ನಟ ಟೈಗರ್‌ಶ್ರಾಫ್‌, ಬಾಲಿವುಡ್‌ನ ಹಿರಿಯ ನಟ ಆಲ್‌ ಪಸಿನೊ ಅವರ ದೊಡ್ಡ ಅಭಿಮಾನಿ.

‘ಬಾಲಿವುಡ್‌ನಲ್ಲಿ ನನ್ನ ತಂದೆ ಜಾಕಿ ಶ್ರಾಫ್‌ ಅವರೇ ನನಗೆ ಆದರ್ಶ ವ್ಯಕ್ತಿ. ಅದೇ ಹಾಲಿವುಡ್‌ನಲ್ಲಿ ನಾನು ಆಲ್‌ ಪಸಿನೊ ಅವರ ದೊಡ್ಡ ಅಭಿಮಾನಿ’ ಎಂದು ಅವರು ಇತ್ತೀಚೆಗೆ ಮುಂಬೈನಲ್ಲಿ  ಹೇಳಿದ್ದಾರೆ.‘ಹೀರೋಪಂತಿ’ ಚಿತ್ರದ ಮೂಲಕ ತಮ್ಮ ಅಭಿನಯ ಬದುಕನ್ನು ಆರಂಭಿಸಿದ್ದ ಟೈಗರ್‌, ತಮ್ಮ ಮುಂದಿನ ಚಿತ್ರಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದ್ದಾರೆ.

‘‘ನಾನು ಸದ್ಯಕ್ಕೆ ‘ಬಾಗಿ’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಜತೆಗೆ ‘ಫ್ಲೈಯಿಂಗ್‌ ಸಿಖ್‌’ ಎಂಬ ಚಿತ್ರವನ್ನೂ ಮಾಡುತ್ತಿದ್ದೇನೆ’’ ಎಂದಿರುವ ಟೈಗರ್‌, ‘ಕುಂಗ್‌ಫೂ ಯೋಗ’ ಎಂಬ ಚಿತ್ರದಲ್ಲಿ ಜಾಕಿಚಾನ್‌ ಅವರೊಂದಿಗೆ ನಟಿಸಲೂ ಆಹ್ವಾನ ಬಂದಿರುವ ಖುಷಿಯಲ್ಲಿದ್ದಾರೆ.‘ಜಾಕಿ ಚಾನ್‌ ಅವರ ಚಿತ್ರದಲ್ಲಿ ನಟಿಸಲು ಆಹ್ವಾನ ಬಂದಿದೆ. ಅದರ ಕುರಿತು ಮಾತುಕತೆ ನಡೆದಿದೆ. ಆದರೆ ಇನ್ನೂ ನಾನು ಸಹಿ ಮಾಡಿಲ್ಲ’ ಎಂದಿರುವ ಟೈಗರ್‌, ತಮ್ಮ ನೆಚ್ಚಿನ ನಟನೊಂದಿಗೆ ನಟಿಸಲು ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

‘ನನ್ನ ವೃತ್ತಿ ಜೀವನದ ಆರಂಭದ ಹಂತದಲ್ಲಿಯೇ ಇಷ್ಟು ಮಹತ್ವದ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗಿದೆ. ಜಾಕಿ ಚಾನ್‌ ಅವರು ನನಗೆ ಯಾವಾಗಲೂ ಸ್ಫೂರ್ತಿ ನೀಡಿದ ನಟ’ ಎಂದು ಅವರು ಪ್ರಶಂಶಿಸಿದ್ದಾರೆ.ಇದೇ ಸಂದರ್ಭದಲ್ಲಿ ಟೈಗರ್‌ ತಮ್ಮ ತಂದೆ ಜಾಕಿ ಶ್ರಾಫ್‌ ಅವರನ್ನೂ ಮನದುಂಬಿ ಹೊಗಳಿದ್ದಾರೆ.

‘ನನ್ನ ತಂದೆಯಲ್ಲಿನ ಮಾನವೀಯ ಗುಣವನ್ನು ನಾನು ಯಾವತ್ತಿಗೂ ಮೆಚ್ಚುತ್ತೇನೆ. ತುಂಬ ವಿನಯವಂತ ಮನುಷ್ಯ ಅವರು. ಅವರು ನನ್ನ ಮತ್ತು ನನ್ನ ಸಹೋದರಿಯನ್ನು ಬೆಳೆಸಿರುವ ರೀತಿಯ ಬಗ್ಗೆ ನನಗೆ ಅಪಾರ ಗೌರವವಿದೆ. ಆ ಕಾರಣದಿಂದಲೇ ನಾನು ಕಷ್ಟಪಟ್ಟು ಕೆಲಸ ಮಾಡಿ ಅವರು ಹೆಮ್ಮೆಪಡುವಂತೆ ಮಾಡಬೇಕಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.