ADVERTISEMENT

'ಬಾಹುಬಲಿ–2' ಚಿತ್ರ ಬಾಕ್ಸ್‌ ಆಫೀಸ್‌ ಗಳಿಕೆಯ ಬಗ್ಗೆ ಯೋಚಿಸುವುದಿಲ್ಲ: ಸಲ್ಮಾನ್‌ ಖಾನ್‌

ಪಿಟಿಐ
Published 26 ಮೇ 2017, 5:58 IST
Last Updated 26 ಮೇ 2017, 5:58 IST
'ಬಾಹುಬಲಿ–2' ಚಿತ್ರ ಬಾಕ್ಸ್‌ ಆಫೀಸ್‌ ಗಳಿಕೆಯ ಬಗ್ಗೆ ಯೋಚಿಸುವುದಿಲ್ಲ: ಸಲ್ಮಾನ್‌ ಖಾನ್‌
'ಬಾಹುಬಲಿ–2' ಚಿತ್ರ ಬಾಕ್ಸ್‌ ಆಫೀಸ್‌ ಗಳಿಕೆಯ ಬಗ್ಗೆ ಯೋಚಿಸುವುದಿಲ್ಲ: ಸಲ್ಮಾನ್‌ ಖಾನ್‌   

ಮುಂಬೈ: ಎಸ್‌.ಎಸ್‌.ರಾಜ್‌ಮೌಳಿ ನಿರ್ದೇಶನದಲ್ಲಿ ಮೂಡಿಬಂದ ‘ಬಾಹುಬಲಿ–2’ ವಿಶ್ವದಾದ್ಯಂತ ಬಿಡುಗಡೆಯಾಗಿ ₹1,565 ಕೋಟಿಗೂ ಅಧಿಕ ಹಣ ಗಳಿಸುವ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದೆ.

2015ರಲ್ಲಿ ‘ಬಾಹುಬಲಿ’ ಚಿತ್ರದ ಮೊದಲ ಭಾಗ ಬಿಡುಗಡೆಯ ಸಂದರ್ಭದಲ್ಲಿ ಸಲ್ಮಾನ್‌ ಖಾನ್‌ ಅಭಿನಯದ ‘ಭಜರಂಗಿ ಬಾಯಿಜಾನ್‌’ ಚಿತ್ರ ಬಿಡುಗಡೆಯಾಗಿತ್ತು.

2017ರ ಏಪ್ರಿಲ್ 28ರಂದು ಬಿಡುಗಡೆಯಾದ ‘ಬಾಹುಬಲಿ–2’ ವಿಶ್ವದಾದ್ಯಂತ ಬಿಡುಗಡೆಯಾಗಿ ಇವರೆಗೂ ₹1565 ಕೋಟಿ ಹಣ ಗಳಿಕೆ ಮಾಡಿದೆ.
ಇದೀಗ ಸಲ್ಮಾನ್‌ ಖಾನ್‌ ಅಭಿನಯದ ‘ಟ್ಯೂಬ್‌ಲೈಟ್‌’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಕಬೀರ್‌ ಖಾನ್ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.