ADVERTISEMENT

ಬೆಂಬಲವೇ ಯಶಸ್ಸು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 19:30 IST
Last Updated 1 ಏಪ್ರಿಲ್ 2015, 19:30 IST
ಬೆಂಬಲವೇ ಯಶಸ್ಸು
ಬೆಂಬಲವೇ ಯಶಸ್ಸು   

ವಿಭಿನ್ನ ಕತೆಗಳನ್ನಾಧರಿಸಿದ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಎಷ್ಟು ಹಣ ಸಂಪಾದಿಸಿತು ಎನ್ನುವುದಕ್ಕಿಂತ ಅದಕ್ಕೆ ದೊರೆಯುವ ಬೆಂಬಲ ಹೆಚ್ಚು ಮುಖ್ಯವಾಗುತ್ತದೆ ಎಂದಿದ್ದಾರೆ ನಟಿ ಕಲ್ಕಿ.

ತೆರೆಕಾಣಲಿರುವ ‘ಮಾರ್ಗರೀಟಾ ವಿತ್ ಸ್ಟ್ರಾ’ ಸಿನಿಮಾಕ್ಕೆ ನಟ ಆಮೀರ್‌ ಖಾನ್‌ ಹಾಗೂ ಅವರ ಪತ್ನಿ ಕಿರಣ್‌ ರಾವ್‌ ಬೆಂಬಲಿಸಿದ್ದರಿಂದ ಕಲ್ಕಿ ತುಂಬಾ ಖುಷಿಯಾಗಿದ್ದಾರೆ. ‘ಅತ್ಯಂತ ಕಡಿಮೆ ಬಂಡವಾಳದಲ್ಲಿ ಉತ್ತಮವಾದ ಕಥೆ ಹೊಂದಿದ ಒಂದು ಸುಂದರ ಸಿನಿಮಾವನ್ನು ಮಾಡಿದ್ದೇವೆ. ಈ ಚಿತ್ರ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದೆ. ಇಂಥ ಸಿನಿಮಾಗಳಿಗೆ ಹಣ ಸಂಪಾದನೆಗಿಂತ ಬೆಂಬಲ ಹೆಚ್ಚು ಮುಖ್ಯ. ಆಮೀರ್‌ ಖಾನ್‌ ಮುಂತಾದ ಸಿನಿಮಾ ಮಂದಿಯಿಂದ ಬೆಂಬಲ ಸಿಕ್ಕಿರುವುದು ಸಮಾಧಾನ ತಂದಿದೆ’ ಎನ್ನುತ್ತಾರೆ ಕಲ್ಕಿ.

ಶೊನಾಲಿ ಬೋಸ್‌ ನಿರ್ದೇಶನದ ಈ ಸಿನಿಮಾದಲ್ಲಿ ಸೆರೆಬ್ರಲ್‌ ಪಾಲ್ಸಿ ಹೊಂದಿದ ಹುಡುಗಿಯ ಪಾತ್ರದಲ್ಲಿ ಕಲ್ಕಿ ಅಭಿನಯಿಸಿದ್ದಾರೆ. ‘ಸಿನಿಮಾ ಎಷ್ಟು ಜನಪ್ರಿಯವಾಗುತ್ತದೆ, ಎಷ್ಟು ಹಣ ಸಂಪಾದಿಸುತ್ತದೆ ಎನ್ನುವುದಕ್ಕಿಂತ ಈ ಚಿತ್ರದ ಕುರಿತು ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಲು ಹೆಚ್ಚು ಕುತೂಹಲವಿದೆ’ ಎಂದು ಹೇಳಿಕೊಂಡಿದ್ದಾರೆ ಕಲ್ಕಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.