ADVERTISEMENT

ಮತ್ತೆ ಐಶ್ವರ್ಯಾ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ಐದು ವರ್ಷಗಳ ದೀರ್ಘ ಅವಧಿಯ ನಂತರ ನಟಿ ಐಶ್ವರ್ಯಾ ರೈ ಬಚ್ಚನ್‌, ಸಂಜಯ್ ಗುಪ್ತಾ ಅವರ  ‘ಜಸ್ಬಾ’ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಅವಧಿಯಲ್ಲಿ ಚಿತ್ರರಂಗದಿಂದ ದೂರ ಉಳಿದಿದ್ದೇನೆ ಎಂಬ ಭಾವನೆ ತಮ್ಮಲ್ಲಿ ಎಂದೂ ಆವರಿಸಿರಲಿಲ್ಲ ಎಂದು ಐಶ್ವರ್ಯಾ ರೈ  ಬಚ್ಚನ್ ತಿಳಿಸಿದ್ದಾರೆ.

41ರ ವಯಸ್ಸಿನ ಐಶ್‌ 2010ರಲ್ಲಿ ತೆರೆ ಕಂಡ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಗುಜಾರಿಶ್’ ಚಿತ್ರದಲ್ಲಿ ಕೊನೆಯ ಬಾರಿಗೆ ನಟಿಸಿದ್ದರು. ‘ಮತ್ತೆ  ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಂತೋಷವಾಗುತ್ತಿದೆ. 

ಬಿಡುಗಡೆಗಾಗಿ ಎದುರು ನೋಡುತ್ತಿರುವ ‘ಜಸ್ಬಾ’ ಚಿತ್ರದಲ್ಲಿ ಶಬಾನಾ ಅಜ್ಮಿ, ಇರ್ಫಾನ್‌, ಚಂದನ್‌ ರಾಯ್‌ ಸನ್ಯಾಲ್‌ ಮತ್ತು ಜಾಕಿ ಶ್ರಾಫ್‌  ಅವರೊಂದಿಗೆ ನಟಿಸಿದ್ದೇನೆ. ಈ ನಟರೊಂದಿಗೆ ನಟಿಸಿರುವುದು ಖುಷಿ ನೀಡಿದೆ’ ಎಂದು ಐಶ್ವರ್ಯಾ ತಿಳಿಸಿದ್ದಾರೆ. 2007ರಲ್ಲಿ ತೆರೆಕಂಡ ದಕ್ಷಿಣ ಕೊರಿಯಾದ ಚಿತ್ರ ‘7 ಡೇಸ್’ನ ರಿಮೇಕ್ ಆಗಿರುವ  ‘ಜಸ್ಬಾ’ ಚಿತ್ರ ಅಕ್ಟೋಬರ್ 9ರಂದು ಬಿಡುಗಡೆ ಆಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.