ADVERTISEMENT

ಮತ್ತೆ ಮತ್ತೆ ಎದುರಾಗುವ ಚಿತ್ರ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2014, 19:30 IST
Last Updated 15 ಏಪ್ರಿಲ್ 2014, 19:30 IST
ಕೇಟ್‌ ವಿನ್ಸ್‌ಲೆಟ್‌
ಕೇಟ್‌ ವಿನ್ಸ್‌ಲೆಟ್‌   

ಒಂದು ಕಾಲದಲ್ಲಿ ಪ್ರಪಂಚವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಸಿನಿಮಾ ಟೈಟಾನಿಕ್‌. ವಿಭಿನ್ನ ಕತೆ ಹಾಗೂ ಸುಂದರಿ ಕೇಟ್‌ ವಿನ್ಸ್‌ಲೆಟ್‌ ಮಿಂಚಿದ ಈ ಕಥಾನಕದ ದೃಶ್ಯವೊಂದರಲ್ಲಿ ಕೇಟ್‌ ನಗ್ನವಾಗಿದ್ದೂ ದೊಡ್ಡ ಸುದ್ದಿ ಮಾಡಿತ್ತು.

ಹದಿನೇಳು ವರ್ಷಗಳ ಬಳಿಕವೂ ಕೇಟ್‌ ಕಾಣಿಸಿಕೊಂಡಿದ್ದ ಆ ನಗ್ನ ಚಿತ್ರದ ಮೇಲೆ ಸಹಿ ಹಾಕುವಂತೆ ಅನೇಕ ಅಭಿಮಾನಿಗಳು ಅವರಲ್ಲಿ ಗೋಗರೆಯುತ್ತಾರಂತೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕೇಟ್‌, ‘ಜನರು ಯಾಕೆ ಹೀಗೆ ಮಾಡುತ್ತಾರೆ ಅರ್ಥವಾಗುತ್ತಿಲ್ಲ. ಹದಿನೇಳು ವರ್ಷಗಳ ಹಿಂದಿನ ಆ ಚಿತ್ರ ನನಗೆ ಮತ್ತೆ ಮತ್ತೆ ಎದುರಾಗುತ್ತಲೇ ಇದೆ. ಅದರಲ್ಲಿ ನಾನು ಸಹಿ ಹಾಕುವುದಿಲ್ಲ. ಅದನ್ನು ನೋಡುತ್ತಿದ್ದಂತೆ ಮನಸ್ಸು ಯಾಕೋ ತಳಮಳಗೊಳ್ಳುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಜೇಮ್ಸ್‌ ಕ್ಯಾಮರಾನ್‌ 1997ರಲ್ಲಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಕೇಟ್‌ ಸೋಫಾ ಮೇಲೆ ನಗ್ನವಾಗಿ ಕಾಣಿಸಿಕೊಳ್ಳುತ್ತಾರೆ. ಸಹ ನಟ ಲಿಯಾನಾರ್ಡೊ ಡಿಕಾರ್ಪಿಯೊ ಆಕೆಯ ಚಿತ್ರವನ್ನು ಬಿಡಿಸುತ್ತಾನೆ. ಅದೇ ಚಿತ್ರದ ಪ್ರತಿಯನ್ನು ತರುವ ಅಭಿಮಾನಿಗಳು ಆ ಚಿತ್ರದ ಮೇಲೆ ಸಹಿ ಹಾಕುವಂತೆ 38 ವರ್ಷದ ಕೇಟ್‌ ಬಳಿ ಗೋಗರೆಯುತ್ತಾರಂತೆ. ಸಿನಿಮಾಕ್ಕಾಗಿ ನಗ್ನವಾದ ಚಿತ್ರ ಎಲ್ಲೆಂದರಲ್ಲಿ ಓಡಾಡುತ್ತದೆ. ಜನರು ಮತ್ತೆ ಮತ್ತೆ ಅದೇ ಚಿತ್ರದ ಜೊತೆಗೆ ಬಂದು ಎದುರಾಗುತ್ತಾರೆ. ಕೆಲವೊಮ್ಮೆ ಇದು ತುಂಬಾ ಫನ್ನಿ ಎನ್ನಿಸುತ್ತದೆ. ಆದರೂ ಅದರ ಮೇಲೆ ಸಹಿ ಮಾಡಲು ಮನಸ್ಸೇಕೋ ಒಪ್ಪುವುದಿಲ್ಲ’ ಎನ್ನುತ್ತಾರೆ ಟೈಟಾನಿಕ್‌ ಚೆಲುವೆ ವಿನ್‌ಸ್ಲೆಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.