ADVERTISEMENT

ಮಾರ್ಚ್‌ 16ಕ್ಕೆ 'ಬಾಹುಬಲಿ–2' ಚಿತ್ರದ ಟ್ರೇಲರ್‌ ಬಿಡುಗಡೆ

ಪಿಟಿಐ
Published 13 ಮಾರ್ಚ್ 2017, 5:49 IST
Last Updated 13 ಮಾರ್ಚ್ 2017, 5:49 IST
ಮಾರ್ಚ್‌ 16ಕ್ಕೆ 'ಬಾಹುಬಲಿ–2' ಚಿತ್ರದ ಟ್ರೇಲರ್‌ ಬಿಡುಗಡೆ
ಮಾರ್ಚ್‌ 16ಕ್ಕೆ 'ಬಾಹುಬಲಿ–2' ಚಿತ್ರದ ಟ್ರೇಲರ್‌ ಬಿಡುಗಡೆ   

ಹೈದರಾಬಾದ್‌:  ಭಾರತ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಚಿತ್ರ ‘ಬಾಹುಬಲಿ’. ಇದರ ಮುಂದುವರಿದ ಭಾಗವಾಗಿ ‘ಬಾಹುಬಲಿ–2’ ಚಿತ್ರದ ಟ್ರೇಲರ್‌ ಮಾರ್ಚ್‌ 16ಕ್ಕೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಬಿಡುಗಡೆಯಾಗಲಿದೆ.

‘ಮಾರ್ಚ್‌ 16ರಂದು ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಎಲ್ಲ ಚಿತ್ರ ಮಂದಿರಗಳಲ್ಲಿ ಬೆಳಗ್ಗೆ 9 ಗಂಟೆಗೆ ಟ್ರೇಲರ್‌ ಬಿಡುಗಡೆಯಾಗಲಿದ್ದು, ಅದೇ ದಿನ  ಸಂಜೆ 5 ರಿಂದ 6 ಗಂಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್‌ ವೀಕ್ಷಿಸಬಹುದು’ ಎಂದು ಚಿತ್ರ ನಿರ್ದೇಶಕ ಎಸ್‌.ಎಸ್‌ ರಾಜಮೌಳಿ ತಿಳಿಸಿದ್ದಾರೆ.

‘ಬಾಹುಬಲಿ–2’ ಚಿತ್ರಕ್ಕೆ ಶೋಭು ಯಲ್ರಗಡ್ಡ, ರಾಘವೇಂದ್ರ ರಾವ್, ಪ್ರಸಾದ್ ದೇವಿನೇನಿ ಹಣ ಹೂಡಿದ್ದಾರೆ.


ಮೂರು ವರ್ಷಗಳಿಂದ ‘ಬಾಹುಬಲಿ’ಯಲ್ಲೇ ಬ್ಯುಸಿಯಾಗಿದ್ದ ನಟ ಪ್ರಭಾಸ್ ಇತ್ತೀಚಿಗಷ್ಟೆ ಚಿತ್ರೀಕರಣದ ಗುಂಗಿನಿಂದ ಹೊರ ಬಂದಿದ್ದಾರೆ. ಚಿತ್ರದಲ್ಲಿ ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಏಪ್ರಿಲ್‌ 28ರಂದು ಚಿತ್ರ ಬಿಡುಗಡೆಯಾಗಲಿದ್ದು, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT