ADVERTISEMENT

ಮೊಬೈಲ್‌ ರನ್ನಿಂಗ್‌ ಆ್ಯಪ್‌

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 20 ಮೇ 2015, 19:30 IST
Last Updated 20 ಮೇ 2015, 19:30 IST
ಮೊಬೈಲ್‌ ರನ್ನಿಂಗ್‌ ಆ್ಯಪ್‌
ಮೊಬೈಲ್‌ ರನ್ನಿಂಗ್‌ ಆ್ಯಪ್‌   

ನಟಿ, ರೂಪದರ್ಶಿ, ಮಿಸ್‌ ಇಂಡಿಯಾ ವಿಜೇತೆ ಹೀಗೆ ವಿಧವಿಧವಾಗಿ ಗುರುತಿಸಿಕೊಂಡ ಗುಲ್‌ ಪನಾಗ್‌ ಇದೀಗ ರನ್ನಿಂಗ್‌ ಆ್ಯಪ್‌ವೊಂದನ್ನು ಬಿಡುಗಡೆ ಮಾಡಿದ್ದಾರೆ.

ದೇಹ ಸೌಂದರ್ಯವನ್ನು ಕಾಪಾಡಿಕೊಂಡು ಸದಾ ಫಿಟ್‌ ಆಗಿರುವ ಈ ನಟಿ ಜನರಲ್ಲಿಯೂ ಓಟದ ಹವ್ಯಾಸ ಮೂಡಿಸುವ ಬಯಕೆಯಿಂದಾಗಿ ಆ್ಯಪ್‌ನ್ನು ಬಿಡುಗಡೆ ಮಾಡಿದ್ದಾರೆ. ‘ಫಸ್ಟ್‌ ರನ್‌’ ಎಂಬ ಹೆಸರಿನ ಈ ಮೊಬೈಲ್‌ ಆ್ಯಪ್‌ ಮೂಲಕ ಓಟಕ್ಕೆ ಸಂಬಂಧಿಸಿದ ಅನೇಕ ಟಿಪ್ಸ್‌ ನೀಡಲಾಗಿದೆ.

‘ನಾನೆಲ್ಲೇ ಹೋದರೂ ಜನ ನನ್ನ ಫಿಟ್‌ನೆಸ್‌ ಬಗ್ಗೆಯೇ ಕೇಳುತ್ತಾರೆ. ಹೇಗೆ ಫಿಟ್‌ನೆಸ್‌ ಕಾಯ್ದುಕೊಳ್ಳುತ್ತೇನೆ ಎಂಬುದು ಅವರೆಲ್ಲರ ಕುತೂಹಲ. ಪ್ರತಿದಿನ ತಪ್ಪದೆ ಜಾಗಿಂಗ್‌ ಮಾಡುವ ಹವ್ಯಾಸ ಇರುವುದರಿಂದ ದೇಹದ ಎಲ್ಲಾ ಅಂಗಾಂಗಗಳಿಗೆ ಅವಶ್ಯವಾದ ವ್ಯಾಯಾಮ ಸಿಗುತ್ತದೆ. ಹೀಗಾಗಿ ದೇಹಕಾಂತಿ ಉಳಿಸಿಕೊಳ್ಳುವುದು ಸುಲಭ.

ಪ್ರತಿನಿತ್ಯ ಓಡುವ ಅಭ್ಯಾಸ ಸೈನ್ಯಾಧಿಕಾರಿಯಾದ ಅಪ್ಪನಿಂದ ಬಳುವಳಿಯಾಗಿ ಬಂತು. ಅಪ್ಪನ ಆಸೆಯಂತೆ 16ನೇ ವಯಸ್ಸಿಗೇ ಈ ಅಭ್ಯಾಸಕ್ಕ ಕಟ್ಟುಬಿದ್ದೆ. ಅಂದು ಹೆಚ್ಚಿನ ತೂಕ ಇರುವವರು ಮಾತ್ರ ಓಟದ ಅಭ್ಯಾಸ ಇಟ್ಟುಕೊಳ್ಳಬೇಕು ಎಂಬ ತಪ್ಪು ಕಲ್ಪನೆ ನನ್ನದಾಗಿತ್ತು. ಆದರೆ ಎಲ್ಲರಿಗೂ ಈ ಅಭ್ಯಾಸ ತುಂಬಾ ಮುಖ್ಯ ಹಾಗೂ ಉತ್ತಮ ಆರೋಗ್ಯಕ್ಕೆ ಇದು ಹೇಳಿ ಮಾಡಿಸಿದ ವ್ಯಾಯಾಮ’ ಎನ್ನುತ್ತಾರೆ ಗುಲ್.

ಅಪ್ಪನ ಒತ್ತಾಯಕ್ಕೆ ಕಟ್ಟುಬಿದ್ದು ಈ ಅಭ್ಯಾಸ ರೂಢಿಸಿಕೊಂಡ ಗುಲ್‌ಗೆ ಈಗ ಇದು ನೆಚ್ಚಿನ ಹವ್ಯಾಸ.  ‘ಪ್ರತಿನಿತ್ಯ ಓಡುವ ಹವ್ಯಾಸ ರೂಢಿಸಿಕೊಂಡರೆ ಅನೇಕ ರೀತಿಯ ಉಪಯೋಗ ಇದೆ ಎನ್ನುವುದು ಸ್ಪಷ್ಟವಾಗಿದೆ. ಹೆಚ್ಚು ಓಡಿದಷ್ಟೂ ಎಂಡೊರ್ಪಿನ್ಸ್‌ ಬಿಡುಗಡೆಗೊಂಡು ಮನಸ್ಸು ಉಲ್ಲಸಿತವಾಗಿರುತ್ತದೆ. ಇದರಿಂದಾಗಿ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ’ ಎಂದು ಆ್ಯಪ್‌ ಬಿಡುಗಡೆ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಗುಲ್‌ ಹಾಗೂ ಗೌರವ್‌ ಜೈಸ್ವಾಲ್‌ ಈ ಆ್ಯಪ್‌ ಸಂಸ್ಥಾಪಕರು. ‘ಈ ಆ್ಯಪ್‌ ನಿಮ್ಮ ತರಬೇತುದಾರರಂತೆ ಕಾರ್ಯನಿರ್ವಹಿಸಲಿದ್ದು, ನೀವು ನಿರಂತರವಾಗಿ ರನ್ನಿಂಗ್‌ ಹವ್ಯಾಸ ಬೆಳೆಸಿಕೊಳ್ಳುವಂತೆ ಮಾಡಲಿದೆ. ಅದೂ ಅಲ್ಲದೆ ಗುಲ್‌ ಅವರ ದನಿಯಲ್ಲಿ ಟಿಪ್ಸ್‌ಗಳಿದ್ದು, ಹೆಚ್ಚು ಆಕರ್ಷಕವಾಗಿದೆ’ ಎಂದಿದ್ದಾರೆ ಜೈಸ್ವಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.