ADVERTISEMENT

ಯೂಟ್ಯೂಬ್‌ನಲ್ಲಿ ‘ಹೆಬ್ಬುಲಿ’ ಟ್ರೆಂಡಿಂಗ್‌

ಕಮಾಂಡೋ ಪಾತ್ರದಲ್ಲಿ ಸುದೀಪ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 11:57 IST
Last Updated 13 ಫೆಬ್ರುವರಿ 2017, 11:57 IST
ಯೂಟ್ಯೂಬ್‌ನಲ್ಲಿ ‘ಹೆಬ್ಬುಲಿ’ ಟ್ರೆಂಡಿಂಗ್‌
ಯೂಟ್ಯೂಬ್‌ನಲ್ಲಿ ‘ಹೆಬ್ಬುಲಿ’ ಟ್ರೆಂಡಿಂಗ್‌   

ಬೆಂಗಳೂರು: ಭಿನ್ನ ಹೇರ್‌ ಸ್ಟೈಲ್‌, ಕಮಾಂಡೋ ಪಾತ್ರ, ಪಾತ್ರಧಾರಿ ಕಿಚ್ಚ ಸುದೀಪ್‌, ಚಿತ್ರ ‘ಹೆಬ್ಬುಲಿ’. ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ಹೆಬ್ಬುಲಿ ಟೈಟಲ್‌ ಸಾಂಗ್‌ ವಿಡಿಯೋ ತುಣುಕು ಬಿಡುಗಡೆಯಾಗಿದೆ.

ವಿಡಿಯೋ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಮೇಲು ಸ್ಥಾನದಲ್ಲಿದೆ. ಸಾವಿರಾರು ಜನರು ಈಗಾಗಲೇ ಹಾಡು ವೀಕ್ಷಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಮಾಡಿಕೊಳ್ರೋ ತಯಾರಿ, ಬರುತಿದೆ ಸವಾರಿ, ಮಾಡಿಕೊಳ್ರೋ ತಯಾರಿ,...ಆರಡಿ ಟೈಗರ್ರು...ಗನ್‌ ಹಿಡಿದು ಗರ್ಜಿಸಿದೆ...ಹುಲಿ ಹುಲಿ...ಹೆಬ್ಬುಲಿ...’ ಇಲ್ಲಿ ನಾಯಕನು ಹೆಬ್ಬುಲಿಯಂತೆ ಬಲಿಷ್ಠ ಎಂಬುದನ್ನು ಬಿಂಬಿಸಲಾಗಿದೆ.

ADVERTISEMENT

ಕೃಷ್ಣ ನಿರ್ದೇಶಿಸಿರು ಚಿತ್ರದಲ್ಲಿ ವಿ.ರವಿಚಂದ್ರನ್‌, ಅಮಲಾಪೌಲ್‌, ರವಿಶಂಕರ್‌, ರವಿಕಿಷನ್ ಸೇರಿದಂತೆ ಮುಂತಾದವರ ಅಭಿನಯವಿದೆ. ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.