ADVERTISEMENT

ಲಂಡನ್‌ ಯುವತಿಯನ್ನು ಮದುವೆಯಾಗುವರೇ ರಣಬೀರ್‌? 

​ಪ್ರಜಾವಾಣಿ ವಾರ್ತೆ
Published 11 ಮೇ 2017, 7:36 IST
Last Updated 11 ಮೇ 2017, 7:36 IST
ಲಂಡನ್‌ ಯುವತಿಯನ್ನು ಮದುವೆಯಾಗುವರೇ ರಣಬೀರ್‌? 
ಲಂಡನ್‌ ಯುವತಿಯನ್ನು ಮದುವೆಯಾಗುವರೇ ರಣಬೀರ್‌?    

ಮುಂಬೈ: ಬಾಲಿವುಡ್‌ನ ಖ್ಯಾತ ಯುವ ನಟ ರಣಬೀರ್ ಕಪೂರ್‌ ಅವರು ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿಯೊಬ್ಬರ ಮಗಳನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಡಿದೆ.

ಇತ್ತೀಚೆಗೆ ರಣಬೀರ್ ಕಪೂರ್‌ ಅವರು ತಾಯಿ ನೀತೂ ಕಪೂರ್‌ ಜತೆ ಲಂಡನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಮದುವೆಯ ಬಗ್ಗೆ ಆ ಉದ್ಯಮಿ ಜತೆ ಮಾತುಕತೆ ನಡೆಸಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌  ಪತ್ರಿಕೆ ವರದಿ ಮಾಡಿದೆ.

ಲಂಡನ್‌ನಲ್ಲಿ ನೆಲೆಸಿರುವ ಆ ಭಾರತೀಯ ಉದ್ಯಮಿ ಯಾರು ಎಂಬುದು ತಿಳಿದುಬಂದಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷಾಂತ್ಯದಲ್ಲಿ ವಿವಾಹ ನಡೆಯುವ ಸಾಧ್ಯತೆಗಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.