ADVERTISEMENT

ವೀರ ರಣಚಂಡಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 19:30 IST
Last Updated 9 ಮಾರ್ಚ್ 2017, 19:30 IST

ಆನಂದ್ ಪಿ. ರಾಜು ಮತ್ತು ರಾಗಿಣಿ ದ್ವಿವೇದಿ ಕಾಂಬಿನೇಷನ್‌ನ ಮತ್ತೊಂದು ಆ್ಯಕ್ಷನ್ ಚಿತ್ರ ‘ವೀರ ರಣಚಂಡಿ’. ವಿ. ಕುಪ್ಪುಸ್ವಾಮಿ ನಿರ್ಮಾಪಕ. ರಮೇಶ್  ಭಟ್, ಪದ್ಮಜಾ ರಾವ್, ಶರತ್ ಲೋಹಿತಾಶ್ವ, ಶೋಭರಾಜ್, ‘ಭಜರಂಗಿ’ ಲೋಕಿ ಮುಂತಾದವರು ತಾರಾಗಣದಲ್ಲಿದ್ದಾರೆ. 

ಕೌರವ ವೆಂಕಟೇಶ್, ಕೆ.ಡಿ. ವೆಂಕಟೇಶ್, ಪಳನಿರಾಜ್ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನ, ಆರ್. ಗಿರಿ ಛಾಯಾಗ್ರಹಣ ಹಾಗೂ ಎಸ್.ಪಿ. ವೆಂಕಟೇಶ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

*
ವರ್ಧನ
ನಾಗೇಂದ್ರ ಅರಸ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ಸಂಕಲನವನ್ನೂ ಮಾಡಿರುವ ಚಿತ್ರವಿದು. ಹರ್ಷ ಮತ್ತು ನೇಹಾ ಪಾಟೀಲ್ ಚಿತ್ರದ ನಾಯಕ– ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ಉದ್ಯಮಿ ಕೆ. ಸುಧಾಕರ್ ಬಂಡವಾಳ ಹಾಕಿದ್ದಾರೆ. ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಮ್ಯಾಥ್ಯೂಸ್ ಮನು ಸಂಗೀತ, ಕುಂಗ್‌ಫು ಚಂದ್ರ್ರು ಸಾಹಸ, ರೇವಣ್ಣ ಕಲಾ ನಿರ್ದೇಶನ ಹಾಗೂ ಸಿದ್ದು ಸಂಭಾಷಣೆ ಚಿತ್ರಕ್ಕಿದೆ. ಚಿಕ್ಕಣ್ಣ, ಪದ್ಮಜಾ ರಾವ್, ಶೋಭರಾಜ್, ಪೆಟ್ರೋಲ್ ಪ್ರಸನ್ನ ಮುಂತಾದವರು ಚಿತ್ರದಲ್ಲಿದ್ದಾರೆ.

ADVERTISEMENT

*
ಬೆಂಗಳೂರು ಅಂಡರ್‌ವರ್ಲ್ಡ್
ಪಿ.ಎನ್. ಸತ್ಯ ನಿರ್ದೇಶನದ ಭೂಗತಲೋಕದ ಕಥೆಯ ಈ ಚಿತ್ರದಲ್ಲಿ ಆದಿತ್ಯ ನಾಯಕನಟನಾಗಿ ಕಾಣಿಸಿಕೊಂಡಿದ್ದಾರೆ. ಮೆಜೆಸ್ಟಿಕ್ ಟೂರಿಂಗ್ ಟಾಕೀಸ್‌ನ ಆನಂದ್ ಬಂಡವಾಳ ಹಾಕಿದ್ದಾರೆ.  ಪಾಯಲ್ ರಾಧಾಕೃಷ್ಣ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಶೋಭರಾಜ್, ಕೋಟೆ ಪ್ರಭಾಕರ್, ಹರೀಶ್ ರೈ ಮುಂತಾದವರು ತಾರಾಗಣದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಮತ್ತು  ಆರ್ಯವರ್ಧನ ಛಾಯಾಗ್ರಹಣ ಮಾಡಿದ್ದಾರೆ.

*
ರಿಯಲ್ ಪೊಲೀಸ್
‘ಸೆಂಟಿಮೆಂಟ್’ ನಿರ್ದೇಶಕ ಎಂಬ ಖ್ಯಾತಿಯ ಸಾಯಿಪ್ರಕಾಶ್ ಅವರ 98ನೇ ಸಿನಿಮಾ ‘ರಿಯಲ್ ಪೊಲೀಸ್’. ಸಾಯಿಕುಮಾರ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರಕ್ಕೆ, ಸಾದಿಕ್‌ವುಲ್ಲಾ ಆಜಾದ್  ಹಾಗೂ ನೂರ್ ಅಹಮದ್  ನಿರ್ಮಾಪಕರು. ದಿಶಾ ಪೂವಯ್ಯ, ಸಾಧು ಕೋಕಿಲ, ಮಂಜುನಾಥ ಹೆಗ್ಡೆ, ಅಕ್ಷತಾ, ಗಣೇಶ್ ರಾವ್, ಸಾಯಿಕೃಷ್ಣ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಜೆ.ಜೆ. ಕೃಷ್ಣ ಛಾಯಾಗ್ರಹಣ ಮತ್ತು  ಬಲರಾಮ್ ಸಂಗೀತ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.