ADVERTISEMENT

ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌ ಟ್ರೇಲರ್‌ಗೆ ಗಣ್ಯರ ಮೆಚ್ಚುಗೆ

ಏಜೆನ್ಸೀಸ್
Published 20 ಏಪ್ರಿಲ್ 2017, 11:59 IST
Last Updated 20 ಏಪ್ರಿಲ್ 2017, 11:59 IST
ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌ ಟ್ರೇಲರ್‌ಗೆ ಗಣ್ಯರ ಮೆಚ್ಚುಗೆ
ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌ ಟ್ರೇಲರ್‌ಗೆ ಗಣ್ಯರ ಮೆಚ್ಚುಗೆ   

ಮುಂಬೈ: ಕ್ರಿಕೆಟ್‌ ಲೋಕದ  ದೇವರು, ಬ್ಯಾಟಿಂಗ್‌ ದಂತಕತೆ ಎಂದೇ ಖ್ಯಾತರಾಗಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸಚಿನ್‌ ತೆಂಡುಲ್ಕರ್‌ ಜೀವನಾಧಾರಿತ ಬಾಲಿವುಡ್‌ ಚಿತ್ರ ‘ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌’ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಈಗಾಗಲೇ 2 ಕೋಟಿಗೂ ಅಧಿಕ ವೀಕ್ಷಣೆ ಕಂಡಿರುವ ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌ ಚಿತ್ರದ ಟ್ರೇಲರ್‌ಗೆ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಹಾಗೂ ಗಾಯಕಿ ಲತಾ ಮಂಗೇಶ್ಕರ್‌ ಟ್ವಿಟರ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದ್ದಾರೆ.

ಯುವರಾಜ್‌ ಸಿಂಗ್‌ ಮಾಸ್ಟರ್‌ ಬ್ಲಾಸ್ಟರ್‌ ಬಗ್ಗೆ ಬರೆದಿರುವ ಮಾತುಗಳಿಗೆ ಪ್ರತಿಕ್ರಿಯಿಸಿರುವ ಸಚಿನ್‌, ಯುವರಾಜ್‌ ಅವರನ್ನು ಸೂಪರ್‌ಸ್ಟಾರ್‌ ಎಂದು ಸಂಬೋಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.