ADVERTISEMENT

ಸಲ್ಮಾನ್‌, ಶಾರುಕ್‌ರಂತೆ ಸ್ಟಾರ್‌ಪಟ್ಟ ನಿಭಾಯಿಸಲು ಪ್ರತಿಭೆ ಅವಶ್ಯ: ಅನುಷ್ಕಾ ಶರ್ಮಾ

ಅಭಿಪ್ರಾಯ

ಪಿಟಿಐ
Published 26 ಮಾರ್ಚ್ 2017, 12:50 IST
Last Updated 26 ಮಾರ್ಚ್ 2017, 12:50 IST
ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ   

ಮುಂಬೈ: ‘ತಾರಾಪಟ್ಟ ನಿರ್ವಹಿಸಲು ಪ್ರತಿಭೆ ಅವಶ್ಯ. ಆದರೆ, ಸಲ್ಮಾನ್‌ ಖಾನ್‌ ಹಾಗೂ ಶಾರುಕ್‌ ಖಾನ್‌ ಅವರಂತೆ ಸ್ಟಾರ್‌ಪಟ್ಟ ನಿಭಾಯಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ’ ಎಂದು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಅನುಷ್ಕಾ ಶರ್ಮಾ, ಶಾರುಕ್‌ ಖಾನ್‌ ಅವರೊಂದಿಗೆ ‘ರಬ್ ನೆ ಬನಾ ದಿ ಜೋಡಿ’, ಅಮಿರ್‌ ಖಾನ್‌ ಅವರೊಂದಿಗೆ ‘ಪಿಕೆ’ ಹಾಗೂ ಸಲ್ಮಾನ್‌ ಖಾನ್‌ ಜತೆ ‘ಸುಲ್ತಾನ್‌’ ಚಿತ್ರಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದರು.

28 ವರ್ಷದ ನಟಿ ಅನುಷ್ಕಾ ಶರ್ಮಾ, ‘ಸ್ಟಾರ್‌ಪಟ್ಟದ ಬಗ್ಗೆ ನಾನು ಯೋಚಿಸಿ ಆತಂಕಕ್ಕೆ ಒಳಗಾಗಿದೆ. ಜತೆಗೆ, ಶಾರುಕ್‌ ಖಾನ್‌, ಸಲ್ಮಾನ್‌ ಖಾನ್‌ ಹಾಗೂ ಅಮೀರ್‌ ಖಾನ್‌ ಅವರಂತೆ ಸ್ಟಾರ್‌ಪಟ್ಟ ನನಗೆ ದೊರೆತಿಲ್ಲ. ಆದರೆ, ಸ್ಟಾರ್‌ಪಟ್ಟದಿಂದ ಕೆಲವೊಮ್ಮೆ ಕೆಟ್ಟ ಅನುಭವ ಪಡೆಯಬೇಕಾಗುತ್ತದೆ’ ಎಂದಿದ್ದಾರೆ.

‘ನಟನೆ ಬಗ್ಗೆ ಶಾರುಕ್‌ ತೋರುವ ಉತ್ಸಾಹ, ನಿರ್ದೆಶಕರನ್ನು ಗೌರವಿಸುವಿಕೆ ಇತರರಿಗೆ ಮಾದರಿ’ ಎಂದು ಶಾರುಕ್‌ ಖಾನ್‌ ಬಗ್ಗೆ ಅನುಷ್ಕಾ ಪ್ರಶಂಸಿದ್ದಾರೆ.

‘ನಟಿ ಎಂದುಕೊಂಡು ನನ್ನ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದೇ ಆದರೆ ಅದು ನನ್ನ ಸೃಜನಶೀಲತೆಗೆ ಪೆಟ್ಟು ಬೀಳುತ್ತದೆ. ಜತೆಗೆ, ತಾರಾಪಟ್ಟ ಎಂಬುಂದು ಕ್ಷಣಿಕ. ದಿನಗಳು ಕಳೆದಂತೆ ಅದು ಮಾಯವಾಗುತ್ತದೆ’ ಎಂದಿದ್ದಾರೆ. ಸದ್ಯ ಅನುಷ್ಕಾ ಶರ್ಮಾ ‘ಫಿಲೌರಿ’ ಚಿತ್ರದ ನಿರ್ಮಾಪಕರಾಗಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.