ADVERTISEMENT

ಹಾಸ್ಯಮುಖಿ ಸನ್ನಿ ಲಿಯಾನ್‌

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 6 ಮೇ 2015, 19:30 IST
Last Updated 6 ಮೇ 2015, 19:30 IST

ಹಸಿಬಿಸಿ ದೃಶ್ಯಗಳಿರುವಂತಹ ಸಿನಿಮಾದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಸನ್ನಿ ಲಿಯಾನ್‌ ಈಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹಾಸ್ಯ ಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿರುವ ಸನ್ನಿ ಮಾತ್ರ ಪ್ರೇಕ್ಷಕರು ತನ್ನ ಕಾಮಿಡಿ ಪಾತ್ರ ನೋಡಿ ನಗುತ್ತಾರೋ ಇಲ್ಲವೋ ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲವಂತೆ.

33 ವರ್ಷದ ಈ ಚೆಲುವೆ ‘ಕುಚ್‌ ಕುಚ್‌ ಲೋಚಾ ಹೈ’ ಎಂಬ ಅಡಲ್ಟ್‌ ಕಾಮಿಡಿ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಸನ್ನಿ ಹೇಳುವಂತೆ ಅವರು ಈ ಚಿತ್ರದಲ್ಲಿ ತುಂಬ ಸಹಜವಾಗಿ ನಟಿಸಿದ್ದಾರಂತೆ.

‘ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಮಿಡಿ ಗ್ರೂಪ್‌ನಲ್ಲಿ ಇದ್ದೆ ಎನ್ನುವುದು ಕೆಲವರಿಗೆ ತಿಳಿದಿಲ್ಲ. ಆ ಸಂದರ್ಭದಲ್ಲಿ ಕಾಮಿಡಿ ಸ್ಕಿಟ್‌ಗಳು, ಆಟಗಳು ಹಾಗೂ ಸ್ಟ್ಯಾಂಡ್‌ಅಪ್‌ ಕಾಮಿಡಿ ಮಾಡುತ್ತಿದ್ದೆ. ಹಾಗಾಗಿ, ಈ ಚಿತ್ರದಲ್ಲಿ ಕಾಮಿಡಿ ಪಾತ್ರವನ್ನು ಚೆನ್ನಾಗಿ ಪೋಷಣೆ ಮಾಡಬಲ್ಲೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ ನನಗೆ ಒಳ್ಳೆ ಹಾಸ್ಯಪ್ರಜ್ಞೆ ಇದೆ’ ಎಂದಿದ್ದಾರೆ ರಾಗಿಣಿ ಎಂಎಂಎಸ್‌ ನಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT