ADVERTISEMENT

ಹಿರಿಯ ಕಲಾವಿದ ಎಂ.ಬಿ.ಪಾಟೀಲ ನಿಧನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 20:02 IST
Last Updated 11 ಸೆಪ್ಟೆಂಬರ್ 2017, 20:02 IST
ಹಿರಿಯ ಕಲಾವಿದ ಎಂ.ಬಿ.ಪಾಟೀಲ ನಿಧನ
ಹಿರಿಯ ಕಲಾವಿದ ಎಂ.ಬಿ.ಪಾಟೀಲ ನಿಧನ   

ಧಾರವಾಡ: ಹಿರಿಯ ಕಲಾವಿದ ಮಲ್ಲಿಕಾರ್ಜುನಗೌಡ ಭೀಮನಗೌಡ ಪಾಟೀಲ (77) ಸೋಮವಾರ ಇಲ್ಲಿ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ.

ವಾರ್ತಾ ಇಲಾಖೆಯ ಮುಖ್ಯ ಕಲಾವಿದರಾಗಿ ನಿವೃತ್ತರಾಗಿದ್ದ ಇವರು ಧಾರವಾಡದಲ್ಲಿ ನೆಲೆಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಲಲಿತಕಲಾ ಅಕಾಡೆಮಿ, ಕೇಂದ್ರ ಹಾಗೂ ರಾಜ್ಯ ಚಿತ್ರಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಸ್ತಬ್ಧ ಚಿತ್ರವನ್ನು, ಸತತ ಒಂಬತ್ತು ವರ್ಷ ಎಂ.ಬಿ.ಪಾಟೀಲ ಅವರೇ ವಿನ್ಯಾಸ ಮಾಡಿದ್ದರು. ಅವರು ವಿನ್ಯಾಸಗೊಳಿಸಿದ ಸ್ತಬ್ಧಚಿತ್ರಗಳಿಗೆ ಎರಡು ಸಲ ಪ್ರಥಮ ಹಾಗೂ ಮೂರು ಸಲ ದ್ವಿತೀಯ ಬಹುಮಾನ ಲಭಿಸಿದೆ. ಹಲವು ಪೌರಾಣಿಕ ಚಲನಚಿತ್ರಗಳಲ್ಲಿ ವಿನ್ಯಾಸಕಾರರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ವಿಜಯಪುರ ಜಿಲ್ಲೆಯ ತಿಕೋಟಾ ಸಮೀಪದ ಧನ್ನರಗಿ ಗ್ರಾಮದಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಆಪ್ತ ವಲಯದವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.