ADVERTISEMENT

₹1 ಪಡೆದು 'ಹರಾಮ್‍ಕೋರ್' ಸಿನಿಮಾದಲ್ಲಿ ನಟಿಸಿದ ನವಾಜುದ್ದೀನ್ ಸಿದ್ದಿಖಿ

ಏಜೆನ್ಸೀಸ್
Published 14 ಜನವರಿ 2017, 11:59 IST
Last Updated 14 ಜನವರಿ 2017, 11:59 IST
₹1 ಪಡೆದು 'ಹರಾಮ್‍ಕೋರ್' ಸಿನಿಮಾದಲ್ಲಿ ನಟಿಸಿದ ನವಾಜುದ್ದೀನ್ ಸಿದ್ದಿಖಿ
₹1 ಪಡೆದು 'ಹರಾಮ್‍ಕೋರ್' ಸಿನಿಮಾದಲ್ಲಿ ನಟಿಸಿದ ನವಾಜುದ್ದೀನ್ ಸಿದ್ದಿಖಿ   

ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ಕೇವಲ ₹1  ಪಡೆದು ಹರಾಮ್‍ಕೋರ್ ಚಿತ್ರದಲ್ಲಿ ನಟಿಸಿದ್ದಾರೆ. ಉತ್ತಮ ಚಿತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕೆಂದು ಹೇಳುವ ನವಾಜುದ್ದೀನ್ ಸಿದ್ದಿಖಿ, ಹರಾಮ್‍ಕೋರ್ ಚಿತ್ರಕ್ಕಾಗಿ ಸಂಭಾವನೆ ಪಡೆದಿಲ್ಲ. ಇದರ ಬದಲು ಕೇವಲ ₹1  ಟೋಕನ್ ಹಣವನ್ನು ಪಡೆದಿದ್ದರು.

ಶ್ಲೋಕ್ ಶರ್ಮಾ ನಿರ್ದೇಶನದ ಈ ಚಿತ್ರ ನಿನ್ನೆ ತೆರೆ ಕಂಡಿತ್ತು.

ಶಿಕ್ಷಕರ ಮತ್ತು ವಿದ್ಯಾರ್ಥಿನಿ ನಡುವಿನ ಪ್ರಣಯ ಕಥೆಯನ್ನು ಹೊಂದಿದ ಸಿನಿಮಾ ಇದಾಗಿದ್ದು ಶ್ವೇತಾ ತ್ರಿಪಾಠಿ ನಾಯಕಿಯಾಗಿ ನಟಿಸಿದ್ದಾರೆ.

ADVERTISEMENT

ನವಾಜ್  ಸೇರಿದಂತೆ ನಮ್ಮ ತಂಡದಲ್ಲಿರುವ ಎಲ್ಲ ನಟಿ ನಟಿಯರು ಕಡಿಮೆ ಸಂಭಾವನೆ, ಇನ್ನು ಕೆಲವರು ಸಂಭಾವನೆ ಪಡೆಯದೆಯೇ ನಟಿಸಿದ್ದಾರೆ. ನಮಗೆ ಈ ಸಿನಿಮಾ ದೊಡ್ಡ ಕನಸಾಗಿತ್ತು. ಅದನ್ನು ನಾವು ನನಸು ಮಾಡಿದ್ದೇವೆ. ಕಡಿಮೆ  ಬಜೆಟ್‍ನ ಚಿತ್ರವಾಗಿದ್ದರೂ, ಚಿತ್ರಕಥೆ ನೋಡಿ ನವಾಜ್ ಇಷ್ಟಪಟ್ಟು, ನಟಿಸಲು ಒಪ್ಪಿದ್ದರು ಎಂದು ಶ್ಲೋಕ್ ಶರ್ಮಾ ಹೇಳಿದ್ದಾರೆ.

ನವಾಜ್ ಅವರು ಟೋಕನ್ ಹಣ ಎಂದು ಕೇವಲ ₹1 ಪಡೆದಿದ್ದಾರೆ. ಅವರ ಬೆಂಬಲದಿಂದಲೇ ಈ ಸಿನಿಮಾ ತೆರೆಗೆ ಬರುವಂತಾಯಿತು ಎಂದಿದ್ದಾರೆ ಸಿಖ್ಯಾ ಎಂಟರ್‍‍ಟೇನ್‍ಮೆಂಟ್‍ನ ಗುನೀತ್ ಮೋಂಗಾ.

ಅನುರಾಗ್ ಕಶ್ಯಪ್ ಮತ್ತು ಮೋಂಗಾ ಅವರು ಜತೆಯಾಗಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.