ADVERTISEMENT

14 ಕೆಜಿ ಬಂಗಾರದ ಲೆಹೆಂಗಾ ಧರಿಸಿದ ನಟಿ!

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2016, 17:57 IST
Last Updated 25 ನವೆಂಬರ್ 2016, 17:57 IST
14 ಕೆಜಿ ಬಂಗಾರದ ಲೆಹೆಂಗಾ ಧರಿಸಿದ ನಟಿ!
14 ಕೆಜಿ ಬಂಗಾರದ ಲೆಹೆಂಗಾ ಧರಿಸಿದ ನಟಿ!   

ಹೈದರಾಬಾದ್:  ನಾಗಾರ್ಜುನ ನಾಯಕನಾಗಿ ಅಭಿನಯಿಸುತ್ತಿರುವ  'ಓಂ ನಮೋ ವೆಂಕಟೇಶಾಯ' ತೆಲುಗು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಾಯಕಿ ಪ್ರಗ್ಯಾ ಜೈಸ್ವಾಲ್ ಬರೋಬ್ಬರಿ 14 ಕೆಜಿ ಬಂಗಾರದ ಲೆಹೆಂಗಾ ಧರಿಸಿದ್ದು, ಫಸ್ಟ್ ಲುಕ್‍ನಲ್ಲಿ ಪ್ರಗ್ಯಾ ಬಂಗಾರದ ಚೆಲುವೆಯಾಗಿ ಮಿಂಚಿದ್ದಾರೆ.

ಸಿನಿಮಾದ ಹಾಡೊಂದರಲ್ಲಿ ನಾಯಕಿ ಈ ಲೆಹೆಂಗಾ ಧರಿಸಿದ್ದು, ಇದು ಅಪ್ಪಟ ಬಂಗಾರದಿಂದ ಮಾಡಿದ ಲೆಹೆಂಗಾ ಎಂದು ನಾಗಾರ್ಜುನ ಟ್ವೀಟ್ ಮಾಡಿದ್ದಾರೆ .

ರಾಘವೇಂದ್ರ ರಾವ್ ನಿರ್ದೇಶನದ ಓಂ ನಮೋ ವೆಂಕಟೇಶಾಯ ಚಿತ್ರ ಭಕ್ತಿ ಪ್ರಧಾನ ಚಿತ್ರವಾಗಿದ್ದು, ಪ್ರಗ್ಯಾ ಜೈಸ್ವಾಲ್ ಮತ್ತು ಅನುಷ್ಕಾ ಶೆಟ್ಟಿ ನಾಯಕಿಯರಾಗಿದ್ದಾರೆ.

ADVERTISEMENT

ವೆಂಕಟೇಶ್ವರ ದೇವರ ಭಕ್ತನಾದ ಹಾತಿ ರಾಮ್ ಬಾಬಾ ಅವರ ಜೀವನಾಧರಿತ ಕತೆ ಇದಾಗಿದ್ದು, ಮುಂದಿನ ವರ್ಷ ತೆರೆಕಾಣಲಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.