ಮುಂಬೈ: ಬಾಲಿವುಡ್ ನಟಿ ಕಂಗನಾ ರನೋಟ್ 80 ವರ್ಷದ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರದ ಮೂಲಕ ಕಂಗನಾ ನಿರ್ದೇಶಕಿಯೂ ಆಗುತ್ತಿದ್ದಾರೆ.ತಮ್ಮ ಹೋಮ್ ಬ್ಯಾನರ್ನ ‘ತೇಜು’ ಚಿತ್ರದಲ್ಲಿ ಕಂಗನಾ ನಟಿಸುವುದರ ಜತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ.
ಈ ಕುರಿತು ಮಾತನಾಡಿದ ಅವರು, ‘ನನ್ನ ಸುತ್ತಮುತ್ತಲಿನ ಹಾಗೂ ನಾನು ಪ್ರೀತಿಸುವ ಎಲ್ಲ ಹಿರಿಯರ ಬದುಕೇ ಈ ಚಿತ್ರಕ್ಕೆ ಪ್ರೇರಣೆ. ಈ ಚಿತ್ರದಲ್ಲಿ ನಾನು 80 ವರ್ಷದ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. 80ರಲ್ಲೂ ತುಂಬಾ ಲವಲವಿಕೆಯಿಂದಿರುವ ಪಾತ್ರವಿದು’ ಎಂದಿದ್ದಾರೆ.
‘ನಾನು ನನ್ನ ಅಜ್ಜ ಅಜ್ಜಿಯ ನೆರಳಲ್ಲಿ ಬೆಳೆದಿದ್ದು ವಯಸ್ಸಾದವರ ಭಾವನೆಗಳು ನನಗೆ ಅರ್ಥವಾಗುತ್ತವೆ. ಹಿರಿಯರು ವಯಸ್ಸಾದ ಮೇಲೆ ನಿರ್ಲಕ್ಷಕ್ಕೊಳಗಾಗುವುದು ನೋವಿನ ಸಂಗತಿ’ ಎಂದಿದ್ದಾರೆ. ಚಿತ್ರವು ಈ ವರ್ಷ ಡಿಸೆಂಬರ್ನಲ್ಲಿ ಸೆಟ್ಟೇರಲಿದ್ದು 2018ರ ಕೊನೆಯಲ್ಲಿ ತೆರೆಗೆ ಬರಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.