ADVERTISEMENT

ಹುಟ್ಟುಹಬ್ಬದಂದೇ ಹೊಸ ಚಿತ್ರ ಘೋಷಿಸಿದ ನಟಿ ಸಮಂತಾ!

ಪಿಟಿಐ
Published 28 ಏಪ್ರಿಲ್ 2024, 12:55 IST
Last Updated 28 ಏಪ್ರಿಲ್ 2024, 12:55 IST
<div class="paragraphs"><p>ನಟಿ ಸಮಂತಾ</p></div>

ನಟಿ ಸಮಂತಾ

   

ಇನ್‌ಸ್ಟಾಗ್ರಾಮ್

ಹೈದರಾಬಾದ್‌: ತೆಲುಗಿನ ಖ್ಯಾತ ನಟಿ ಸಮಂತಾ ರುತ್‌ ಪ್ರಭು ಅವರು ಇಂದು (ಭಾನುವಾರ) ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವೇಳೆ ‘ಬಂಗಾರಂ‘ ಚಿತ್ರದಲ್ಲಿ ಕಾಣಿಸಿಕೊಳ್ಳುವುದಾಗಿ ನಟಿ ಅಧಿಕೃತವಾಗಿ ತಿಳಿಸಿದ್ದಾರೆ.

ADVERTISEMENT

‌ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಸಮಂತಾ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

'ಎಲ್ಲವೂ ಚಿನ್ನದಂತೆಯೇ ಮಿನುಗಬೇಕೆಂದಿಲ್ಲ. ಬಂಗಾರಂ ಸಿನಿಮಾ ಶೀಘ್ರವಾಗಿ ಪ್ರಾರಂಭವಾಗಲಿದೆ' ಎಂದು ಸಮಂತಾ ಬರೆದುಕೊಂಡಿದ್ದಾರೆ.

ಬಂಗಾರಂ ಸಿನಿಮಾದ ಟೀಸರ್‌ನಲ್ಲಿ ನಟಿ ಸಮಂತಾ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಈ ಚಿತ್ರವನ್ನು 'ತ್ರಾಲಾಲ ಮೂವಿಂಗ್ ಪಿಕ್ಚರ್ಸ್' ನಿರ್ಮಿಸುತ್ತಿದೆ. ಬಂಗಾರಂ ಚಿತ್ರವು 2025ರಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಸಿನಿಮಾ ನಿರ್ಮಾಣ ಸಂಸ್ಥೆ 'ತ್ರಾಲಾಲ ಮೂವಿಂಗ್ ಪಿಕ್ಚರ್ಸ್' ಅನ್ನು ಸಮಂತಾ ಅವರು ಕಳೆದ ವರ್ಷ ಆರಂಭಿಸಿದ್ದರು.

ಸಮಂತಾ, ‘ಮಯೋಸಿಟಿಸ್’ (ಸ್ನಾಯು ಉರಿಯೂತ) ಎಂಬ ಕಾಯಿಲೆಗೆ ತುತ್ತಾಗಿರುವ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಬಹಿರಂಗಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.