ADVERTISEMENT

ಅಂಡಮಾನ್‌ನಲ್ಲಿ ನಾಗಿಣಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST
ಅಂಡಮಾನ್‌ನಲ್ಲಿ ಚಿತ್ರೀಕರಣ ನಡೆದಿರುವ ದೃಶ್ಯ
ಅಂಡಮಾನ್‌ನಲ್ಲಿ ಚಿತ್ರೀಕರಣ ನಡೆದಿರುವ ದೃಶ್ಯ   

‘ಜೀ ಕನ್ನಡ’ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ನಾಗಿಣಿ’ಯ ಚಿತ್ರೀಕರಣ ಅಂಡಮಾನ್‌ನಲ್ಲಿ ನಡೆದಿದೆ. ಅಲ್ಲಿ ಚಿತ್ರೀಕರಣ ನಡೆದಿರುವುದಕ್ಕೆ ಹಿನ್ನೆಲೆಯಾಗಿ ನಿರ್ದೇಶಕರು ಒಂದು ಕಥೆಯನ್ನು ಹೆಣೆದಿದ್ದಾರೆ.

ನಾಗಿಣಿಯನ್ನು ಅಪಹರಣ ಮಾಡಿರುವ ದುಷ್ಟರು, ಆಕೆಯನ್ನು ಅಂಡಮಾನ್‌ನ ಕಾಡಿನಲ್ಲಿ ಇರಿಸಿಕೊಂಡಿದ್ದಾರೆ. ನಾಗಮಣಿಯನ್ನು ಕಿತ್ತುಕೊಳ್ಳುವ ಹಂತವನ್ನು ಅವರು ತಲುಪಿದ್ದಾರೆ. ಕಥಾನಾಯಕ ಅರ್ಜುನ್ ತನ್ನ ಹೆಂಡತಿಯನ್ನು ಅಪಹರಣಕಾರರಿಂದ ಬಿಡಿಸಿಕೊಂಡು ಬರಲು ಅಂಡಮಾನ್‍ನತ್ತ ಪ್ರಯಾಣಿಸುತ್ತಾನೆ. ದುಷ್ಟರು ಹಲವು ಹಂತಗಳಲ್ಲಿ ಕಟ್ಟಿರುವ ಕೋಟೆಯನ್ನು ಭೇದಿಸಿ ಅಮೃತಾಳನ್ನ ಕಾಪಾಡುತ್ತಾನೆ.

ಅಂಡಮಾನ್, ನಿಕೋಬಾರ್ ದ್ವೀಪಗಳ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಸಂಚಿಕೆಗಳು ಸೋಮವಾರದಿಂದ ಆರಂಭವಾಗಿ ಮೂರು ವಾರಗಳವರೆಗೆ ಪ್ರಸಾರವಾಗಲಿವೆ. ಈ ಸಂಚಿಕೆಗಳಲ್ಲಿ ಹುಲಿ, ಸಿಂಹ, ಹೆಬ್ಬಾವುಗಳನ್ನು ಗ್ರಾಫಿಕ್ಸ್‌ ಮೂಲಕ ತೋರಿಸುತ್ತಾರಂತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.